ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲೂ ಮಹಿಳೆಯರ ಸಬಲಿಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜಿಲ್ಲಾ ನಿರ್ದೇಶಕರಾದ ಸಂತೋಷ ಕುಮಾರ ರೈ. ಅವರು ಹೇಳಿದರು.
ಚಡಚಣ ಪಟ್ಟಣದ ಗೋಡಿಹಾಳ ರಸ್ತೆಯಲ್ಲಿರುವ ಶ್ರೀ ಗುರು ಕೃಪಾ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ(ರಿ) ಇಂಡಿ ಇವರು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನ ರೇಖೆಯಲ್ಲಿರುವ ಗ್ರಾಮೀಣ ಭಾಗದ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ಮಹಿಳೆಯರು ಸಂಘದಿಂದ ಸಾಲ-ಸೌಲಭ್ಯವನ್ನು ಪಡೆದು ಕಾಲಮಿತಿಯಲ್ಲೇ ಸರಿಯಾಗಿ ಸಾಲ ಮರುಪಾವತಿಸುವ ಮೂಲಕ ಹೆಚ್ಚಿನ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಕಾಶೀಬಾಯಿ ವಾಲಿಕಾರ ಅವರು, ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರಾದ ಮೇಲೆ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಸಮಾಜದ ಮುಖ್ಯ ವಾಹಿನಿಗೆ ಮಹಿಳೆಯರು ಬರಲು ಸಾದ್ಯವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕು ಕ್ಷೇತ್ರ ಯೋಜನಾಧಿಕಾರಿ ನಟರಾಜ ಐ.ಒ ಮಾತನಾಡಿ, ತಾಲೂಕಿನಲ್ಲಿ ಯೋಜನೆಯಿಂದ ನೀಡಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಮೂಲಕ ಸಂಘಗಳ ಗುಣಮಟ್ಟವನ್ನು ಕಾಪಾಡಿರ್ಕೊಳ್ಳುವಲ್ಲಿ ಪದಾಧಿಕಾರಿಗಳ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
ಈ ವೇಳೆ ಜವಳಿ ವರ್ತಕರಾದ ಅಜೀತ ಮುತ್ತಿನ, ನಿವರಗಿಯ ಬ್ಯಾಂಕ ಆಪ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕ ವಿಜಯಕುಮಾರ, ಪತ್ರಕರ್ತರಾದ ಸಂಗಮೇಶ ಹೂಗಾರ, ಜಿಲ್ಲಾ ಜನಜಾಗೃತಿ ಸದಸ್ಯರಾದ ರುದ್ರಪ್ಪ ಪೂಜಾರಿ, ಮಾದೇವ ಬಿರಾದಾರ, ಶಿವಣ್ಣ ಪಾಂಡ್ರೆ, ವಲಯಾಧಿಕಾರಿ ಜಗದೇಶ ಕುಂಬಾರ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು, ಸೇವಾ ಪ್ರತಿನಿಧಿಗಳು, ವಿವಿಧ ಒಕ್ಕೂಟಗಳ ಸರ್ವ ಸದಸ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಮಹಿಳೆಯರ ಸಬಲಿಕರಣಕ್ಕೆ ಹೆಚ್ಚಿನ ಒತ್ತು: ಸಂತೋಷ ಕುಮಾರ ರೈ ಅಭಿಮತ”
Related Posts
Add A Comment

