ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಸೇರಿದಂತೆ ತಾಲೂಕಿನ ಹಲವೆಡೆ ಅಪಘಾತಗಳು ಹೆಚ್ಚುತ್ತಿದ್ದು ಇವುಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಯಿಂದ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಿ ಜಾಗೃತಿ ಮೂಡಿಸಿದರು.
ಅತೀ ವೇಗ, ತ್ರಿಬಲ್ ರೈಡರ್, ಮಧ್ಯದ ಅಮಲಿನಲ್ಲಿ ವಾಹನ ಚಲಾಯಿಸುವವರಿಗೆ ಎಚ್ಚರಿಸಲು ನಿಂತಿರುವ ಭಂಗಿಯಲ್ಲಿನ ಪೊಲೀಸ್ ಪೇದೆಯ ಕಟೌಟ್ಗಳನ್ನು ರಸ್ತೆಗಳ ತಿರುವು, ಅಪಘಾತ ವಲಯಗಳಲ್ಲಿ ಅಳವಡಿಸಲಾಗಿದೆ. ರಿಕ್ಷಾವಾಲಾ ಗಳು ಅತಿಯಾದ ವೇಗದಲ್ಲಿ ಚಲಿಸದಂತೆ, ಹೆಚ್ಚಿನ ಗ್ರಾಹಕರನ್ನು ಅಟೋದಲ್ಲಿ ಕೂಡಿಸದಂತೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್‌ಎಲ್ ಮನ್ನಾಬಾಯಿ ಅಟೋ ಸ್ಟ್ಯಾಂಡ್ ಗೆ ತೆರಳಿ ತಿಳಿ ಹೇಳಿದರು.
ಅಟೋಗಳನ್ನು ಬೇಗನೆ ಗುರುತಿಸಲು ಎಲ್ಲ ಅಟೋಗಳಿಗೆ ನಂಬರ್ ಗಳನ್ನು ಅಳವಡಿಸಿದರು. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡದ ಬಿಸಿ ಮುಟ್ಟಿಸಿದರು. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

