ಉದಯರಶ್ಮಿ ದಿನಪತ್ರಿಕೆ
ಇಂಡಿ: ರಕ್ತದಾನದಿಂದ ಮನುಕುಲ ಉಳಿಯಲಿಕ್ಕೆ ಸಾಧ್ಯ. ಆರೋಗ್ಯವಂತ ಯುವಕರು ರಕ್ತದಾನ ಮಾಡಲಿಕ್ಕೆ ಮುಂದೆ ಬರಬೇಕು ಎಂದು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ಹೇಳಿದರು.
ಮಂಗಳವಾರ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಅಂಬಾಭವಾನಿ ಎಜುಕೇಶನ್ ಟ್ರಸ್ಟ ಹಾಗೂ ಜಗದಂಬಾ ವಿದ್ಯಾವರ್ಧಕ ಸಂಘ ಹಮ್ಮಿಕೊಂಡ ನಾಡದೇವಿ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ, ತಾಲೂಕ ಆಸ್ಪತ್ರೆ ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಏರ್ಪಡಿಸಿದ ಉಚಿತ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಮತ್ತು ಕಣ್ಣಿನ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು.
ರಕ್ತ ಕೊಡವದರಿಂದ ಹೊಸ ರಕ್ತವನ್ನು ಉತ್ಪತ್ತಿಯಾಗಿ ಮರಣಾಂತಿತ ರಕ್ತ ಹೀನತೆಯಲ್ಲಿರುವ ಎಷ್ಟೋ ಜನರಿಗೆ ಜೀವ ಉಳಿವುದರ ಜೊತೆಗೆ ಒಬ್ಬ ಆರೋಗ್ಯವಂತ ವ್ಯಕ್ತಿಯಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ದಿನನಿತ್ಯ ಅತ್ಯವಶ್ಯಕ ಬೇಕಾದ ಆಹಾರ, ವಸ್ತು ಉತ್ಪಾದನೆ ಮಾಡಬಹುದು ಆದರೆ ರಕ್ತ ಮಾತ್ರ ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ದಾನಿಯ ದೇಹದಿಂದ ಮಾತ್ರ ರಕ್ತ ಪಡೆಯಲು ಸಾಧ್ಯ. ಆದರಿಂದ ಆರೋಗ್ಯವಂತ ವ್ಯಕ್ತಿಗಳನ್ನು ಮಾಡುವ ರಕ್ತದಾನ ಮತ್ತೋಬ್ಬರಿಗೆ ಮಾದರಿಯಾಗಬೇಕು ಎಂದರು.
ನಾಗಠಾಣ ಮಾಜಿ ಶಾಸಕ ದೇವಾನಂದ ಎಫ್ ಚವ್ಹಾಣ ಮಾತನಾಡಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಗ್ರಾಮದ ಯುವಕರು ೬೨ಕ್ಕೂ ಹೆಚ್ಚು ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿದರು.ಕಣ್ಣಿನಣ ತಪಾಸಣೆ ಶಿಬಿರದಲ್ಲಿ ೧೦೪ ಭಾಗಿಯಾಗಿರುವುದು ಹೆಮ್ಮೆಯ ವಿಷಯ ಎಂದರು.
ತಾಲೂಕ ಆರೋಗ್ಯ ಅಧಿಕಾರಿ ಅರ್ಚನ ಕುಲಕಣ ð, ತಡವಲಗ ಎನ್.ಸಿ.ಡಿ. ಘಟಕದ ಆಡಳಿತ ವೈದ್ಯಾಧಿರಿ ಕೃಷ್ಣಕುಮಾರ ಜಾಧವ, ಪ್ರಶಾಂತ ಧೂಮಗೊಂಡ, ಹಿರಿಯ ಮತ್ತು ಕಿರಿಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

