ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಶರಣರ ನಾಡಿನ ನಾಡದೇವಿಯ ೭ನೇ ವರ್ಷದ ಉತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಬುದ್ನಿ ಓಣಿಯಲ್ಲಿ ದಿ:೦೮ ರಿಂದ ೧೨ ರವರೆಗೆ ಪ್ರತಿಷ್ಠಾಪನೆಗೊಳ್ಳುತ್ತಿರುವ ನಾಡದೇವಿ ಮಹೋತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಮಂಗಳವಾರ ಸಾಯಂಕಾಲ ಇಂಡಿ ರಸ್ತೆಯ ಕೆ.ಇ.ಬಿಯಿಂದ ಪ್ರಾರಂಭಗೊಂಡು, ಅಂಬೇಡ್ಕರ ವೃತ್ತ, ಮೊಹರೆ ವೃತ್ತ ಮಾರ್ಗವಾಗಿ ಮೇನ್ ಬಜಾರ್, ಪತ್ತಾರಕಟ್ಟೆಯ ಮೂಲಕ ಪ್ರತಿಷ್ಠಾಪನೆಯ ಸ್ಥಳ ರಾತ್ರಿ ತಲುಪಿತು. ಉತ್ಸವದಲ್ಲಿ ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞ ಪ್ರಭುಗೌಡ ಬಿ.ಎಲ್.(ಚಬನೂರ) ಪಾಲ್ಗೊಂಡು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಹಲಗೆ, ಡೋಳ್ಳು ವಾಧ್ಯಗಳ ತಂಡಗಳು ಹಾಗೂ ಅಬ್ಬರ ಸಂಗೀತದ ನಡುವೆ ಯುವಕರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದರು.
ಉತ್ಸವ ಸಮೀತಿ ಅಧ್ಯಕ್ಷ ಕಲ್ಮೇಶ ಬುದ್ನಿ, ಪರದೇಶಿಮಠಶ್ರೀ, ಸೋಮಶೇಖರ ಹಿರೇಮಠ, ಸೋಮು ದೇವೂರ, ಕಾಶೀನಾಥ ಕೋರಿ, ಪ್ರಕಾಶ ಮಲ್ಲಾರಿ, ಕಾಶೀನಾಥ ಹಿರೇಮಠ, ಶ್ರೀಶೈಲ ಯಂಭತ್ನಾಳ, ವೀರೇಶ ಬುದ್ನಿ, ದತ್ತಾತ್ರೇಯ ಕುಲಕರ್ಣಿ, ಕುಮಾರಸ್ವಾಮಿ ಹಿರೇಮಠ, ಮಹೇಶ ಯಾಳಗಿ, ಸಚಿನ ಬುದ್ನಿ, ವಿಶಾಲ್ ಭಾಸುತ್ಕರ್, ರಾಘವೇಂದ್ರ ಕುಲಕರ್ಣಿ, ಚಿದಾನಂದ ಕಂಬಾರ, ಶಂಕರಗೌಡ ಪಾಟೀಲ, ಚಂದ್ರಶೇಖರ ದಾನಗೊಂಡ, ಪಿಂಟೂ ಭಾಸುತ್ಕರ್, ದರ್ಶನ ನಾಡಗೌಡ, ವೀರೇಶ ಭಾಸುತ್ಕರ್, ಪವನ ಬುದ್ನಿ, ಸಿದ್ದು ಮೇಲಿನಮನಿ, ಶಿವರಾಜ ತಳವಾರ, ದಯಾನಂದ ರಾಠೋಡ, ರಾಜು ಮಿರಗಿ, ಅಪ್ಪು ಅವಟಿ ಇದ್ದರು.

