ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜ್ಞಾನ ಮತ್ತು ವಿಜ್ಞಾನ ಸಹಿತವಾಗಿರುವ ಭಗವದ್ಗೀತೆ ನಮಗಷ್ಟೆ ಅಲ್ಲದೆ ನಮ್ಮ ಮುಂದಿನ ತಲೆಮಾರಿಗೆ ಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಪಿ. ನಾಗೇಶ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಶಿರಸಿ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನವನ್ನು ಸಂಘಟಿಸುವ ಉದ್ದೇಶದಿಮದ ಹಮ್ಮಿಕೊಳ್ಳಲಾದ ಪ್ರಶಿಕ್ಷಣ ವರ್ಗದಲ್ಲಿ ಅವರು ಮಾತನಾಡಿದರು.
ಜ್ಞಾನವಿದ್ದಲ್ಲಿ ವಿಜ್ಞಾನವನ್ನು ವಿಶ್ಲೇಷಣೆ ಮಾಡಬಹುದಾಗಿದೆ. ವಿಜ್ಞಾನವನ್ನು ಅಧ್ಯಯನ ಮಾಡಬೇಕಾದರೆ ಜ್ಞಾನದ ಅರಿವು ಇರಬೇಕಾಗುತ್ತದೆ. ಅಂತಹ ಜ್ಞಾನ, ವಿಜ್ಞಾನ, ಮನೋವಿಜ್ಞಾನ ಅಲ್ಲದೆ ಸರ್ವಜ್ಞಾನ ಸದೃಶ ಗ್ರಂಥ ಭಗವದ್ಗೀತೆಯಾಗಿದೆ. ಆದುದರಿಂದ ಇದನ್ನು ಅಭ್ಯಸಿಸಿ ಅನ್ವಯಿಸಿಕೊಳ್ಳಲೇಬೇಕಾಗಿದೆ. ಈ ರೀತಿ ಪ್ರಶಿಕ್ಷಣ ವರ್ಗಕ್ಕೆ ಬರುವಾಗ ನಾವು ನಮ್ಮ ಮಕ್ಕಳನ್ನ, ಮನೆಯ ಸದದ್ಯರುಗಳನ್ನ, ಪರಿಚಿತರೊಂದಿಗೆ ಜೊತೆಗೂಡಿ ಬಂದಲ್ಲಿ ಅನೂಕೂಲವಾಗುತ್ತದೆ. ಅಲ್ಲದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಜ್ಞಾನ ನಿರಂತರವಾಗಿ ಹರಿಯಲು ಸಾಧ್ಯವಾಗುತ್ತದೆ ಎಂದರು.
ಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೀತಿ ದೇಗಿನಾಳ, ಅಭಿಯಾನ ಸಮಿತಿಯ ಅಧ್ಯಕ್ಷ ಶ್ರೀಶೈಲ್ ದೊಡಮನಿ ಮಾತನಾಡಿದರು. ಶಿಕ್ಷಕಿ ರಂಜಿತಾ ಹೆಗಡೆ ಭಗವದ್ಗೀತೆಯ ೯ ನೇ ಅಧ್ಯಾಯದ ಪ್ರಶಿಕ್ಷಣ ನಡೆಸಿಕೊಟ್ಟರು. ಈ ವೇಳೆ ಉಪಾಧ್ಯಕ್ಷ ಎ.ಆರ್.ಪಾಟೀಲ್, ಶ್ರೀಹರಿ ಅಂಗಡಿ, ಸರಸ್ವತಿ ಮಡಿವಾಳರ, ಶರಣು ಗಂಗನ ಗೌಡರ್, ಶೀವಲೀಲಾ ಕವಡಿಮಟ್ಟಿ, ರೇಖಾ ಕೊಂಡಗೂಳಿ, ನಿರ್ಮಲಾ ಗುರವ್ಹ, ಲಲಿತಾ ಇಳಕಲ್, ಸರಸ್ವತಿ ಪೀರಾಪೂರ ಸುಮಾ ಅಂಗಡಿ, ದೇವಮ್ಮ ಪಾಟೀಲ್, ಸುರೇಖಾ ಕಿಲ್ಲಾರಟ್ಟಿ, ಬಸಮ್ಮ ಡಂಬಾಳ, ರೇಖಾ ವಾಲಿ, ರೇಣುಕ ಗಂಗನ ಗೌಡರ್,ಗಂಗಮ್ಮ ಚೌದರಿ ಲಕ್ಮೀ ಪವಾರ, ರಶ್ಮಿ ತೇಲಂಗಿ, ಗಂಗಮ್ಮ ಟಿ, ಸೇರಿದಂತೆ ಮತ್ತೀತರರು ಇದ್ದರು.
ಸಮಿತಿಯ ಉಪಾಧ್ಯಕ್ಷೆ ಸಂಗಮ್ಮ ದೇವರಳ್ಳಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಅಭಿಯಾನದ ಕಾರ್ಯವೈಖರಿಯ ವಿಸ್ತೃತ ಮಾಹಿತಿ ನೀಡಿದರು. ಪ್ರಶಿಕ್ಷಕ ಮಂಜುನಾಥ ಪಡದಾಳಿ ನಿರೂಪಿಸಿದರು. ಪ್ರಭುಲಿಂಗ ನಂದೆಪ್ಪನವರ ವಂದಿಸಿದರು.

