ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ೨೧ ಹಾಗೂ ೨೨ನೇ ವಾರ್ಡಿಗೆ ಮೂಲಭೂತ ಸೌಕರ್ಯ ಒದಗಿಸದ ಹಿನ್ನಲೆ ಸ್ಥಳೀಯ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಾರ್ಡಿನ ಚರಂಡಿಗಳನ್ನು ಸ್ವಚ್ಚವಾಗಿಡದ ಹಿನ್ನಲೆ ದಿನಂಪ್ರತಿ ಸೊಳ್ಳೆಗಳ ಕಾಟ ಹಾಗೂ ಮೂಲಭೂತ ಸೌಕರ್ಯಗಳ ಕೊರೆತೆಯಿರುತ್ತದೆ. ೨೨ನೇ ವಾರ್ಡಿನ ಬೋರವೆಲ್ ಕೆಟ್ಟು ೩ ತಿಂಗಳು ಗತಿಸಿದೆ. ಪುರಸಭೆ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಕ್ಯಾರೆ ಎನ್ನುತ್ತಿಲ್ಲ ಅಧಿಕಾರದ ನಶೆಯಲ್ಲಿ ತಿರುತ್ತಿದ್ದಾರೆ. ಹಲವು ಬಾರಿ ಪುರಸಭೆ ಸದಸ್ಯರಿಗೆ ಕರೆ ಮಾಡಿದ್ದೇವೆ, ನೂತನ ಅಧ್ಯಕ್ಷರಿಗೆ ಕರೆ ಮಾಡಿದ್ದೇವೆ ಯಾರೂ ಕೂಡಾ ಸ್ಪಂದನೆ ಮಾಡಿರುವುದಿಲ್ಲ. ತುಂಬಿದ ಚರಂಡಿ ಸ್ವಚ್ಚವಾಗಿಲ್ಲ ಹಲವು ಕಡೆ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಈ ಸಮಸ್ಯೆಗಳಿಗೆ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಕಾರಣ ಕರ್ತವ್ಯಲೋಪದ ಅಡಿಯಲ್ಲಿ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕ, ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ, ಸ್ಥಳೀಯ ನಿವಾಸಿಗಳಾದ ದೌಲತ ಬಳಗಾನೂರ, ರವಿ ವಾಲೀಕಾರ, ಉದಂತ ಚಿಕ್ಕ ಸಿಂದಗಿ, ಸಿದ್ದು ಬಳಗಾನೂರ, ರಮೇಶ ಸರಸಂಬಿ, ದಾದಾಪೀರ ನಾಲತವಾಡ, ಕಮಲಾಭಾಯಿ ಭೂತಿ, ಶ್ವೇತಾ ಚಿಕ್ಕ ಸಿಂದಗಿ, ಶಿವಲಿಂಗಮ್ಮ ಬಳಗಾನೂರ ಸೇರಿದಂತೆ ವಾರ್ಡಿನ ನಿವಾಸಿಗಳು ಇದ್ದರು.

