ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನೆಲ್ಲೆಡೆ ಸಚಿವ ಎಂ.ಬಿ.ಪಾಟೀಲರ ಜನ್ಮ ದಿನಾಚರಣೆಯನ್ನು ಅಭಿಮಾನಿಗಳು, ಹಿತೈಷಿಗಳು, ಧುರಿಣರು, ಯುವಕರು ಕೇಕ್ ಕತ್ತರಿಸಿ ಗ್ರಾಮದ ದೇವರುಗಳಿಗೆ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನೀಡಿ ಅದ್ದೂರಿಯಾಗಿ ಆಚರಿಸಿದರು.
ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ಸಚಿವರ ಹೆಸರಲ್ಲಿ ಯುವಕರೊಂದಿಗೆ ಪೂಜೆ ಸಲ್ಲಿಸಿ ಮಾತನಾಡಿದ ಎಂ.ಬಿ.ಪಾಟೀಲ ಪೌಂಡೇಶನ್ ಕಾರ್ಯದರ್ಶಿ ಯಾಕುಬ ಜತ್ತಿ, ಸಚಿವರು ಮಾಡಿದ ನೀರಾವರಿ ಕ್ರಾಂತಿ, ಶೈಕ್ಷಣಿಕ ಕ್ರಾಂತಿ, ಕೋಟಿ ವೃಕ್ಷ ಅಭಿಯಾನ ನಮ್ಮ ಜೀವಿತಾವಧಿ ಅಷ್ಟೆ ಅಲ್ಲದೇ ಮುಂದಿನ ತಲೆಮಾರಿನ ಪಿಳಿಗೆಗಳಿಗೆ ಅನೂಕೂಲವಾಗಲಿದೆ. ಈಗ ಕೈಗಾರಿಕಾ ಕ್ರಾಂತಿಯ ಮೂಲಕ ಅವರ ಸಾಧನೆಯ ಹಾದಿ ಸಾಗುತ್ತಿದೆ. ಇನ್ನೂ ಹೆಚ್ಚಿನ ಹುದ್ದೆ ಅಲಂಕರಿಸಿ ನಾಡಿನ ಜನರ ಒಳಿತಿಗಾಗಿ ಶ್ರಮಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಸಾಮರ್ಥ್ಯ ದೇವರು ಒದಗಿಸಲಿ ಎಂದು ಶುಭ ಹಾರೈಸಿದರು.
ಈ ಭಾಗದ ರೈತರಿಗೆ ನೀರಾವರಿ ಯೋಜನೆಗಳು ಕನಸಿನ ಮಾತಾಗಿದ್ದವು. ಈ ಭಾಗದತ್ತ ನೀರಾವರಿ ಮಾಡಲು ಸಾಧ್ಯವೇ ಇಲ್ಲ ಎಂಬ ಮಾತುಗಳಿದ್ದವು. ಅದನ್ನೆ ಸವಾಲಾಗಿ ಸ್ವೀಕರಿಸಿ ಅತಿ ಎತ್ತರ ಪ್ರದೇಶ ಮಹಾರಾಷ್ಟ್ರದ ಕೊನೆಯ ಹಳ್ಳಿಯವರೆಗೂ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ರೈತರ ಪಾಲಿನ ದೇವಾರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಮಸಿದ್ದಗೌಡ ಪಾಟೀಲ್ ಸುರೇಶ ಪವಾರ, ಮೈಬೂಬ್ ಜತ್ತಿ,
ಮೇಲಗಿರಿ, ಹೊಸಮನಿ, ರಮೇಶ್ ಭಜಂತ್ರಿ ರಾಹುಲಖವಿ,
ವಿನಾಯಕ ಜಮಖಂಡಿ, ಟಿಪ್ಪುಸುಲ್ತಾನ್ ಮುಲ್ಲಾ , ಇಮಾಮಸಾಬ ಮುಲ್ಲಾ, ಅಂಬರೀಷ್ ಹಟ್ಟಿ, ರಮೇಶ ದೊಡಮನಿ ಊರಿನ ಹಿರಿಯರು, ಯುವ ಮುಖಂಡರು,ಗ್ರಾಮದ ಜನರು ಇದ್ದರು.

