ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಆಲಮಟ್ಟಿ ಡ್ಯಾಂ ಸೈಟ್ ಜವಾಹರ ನವೋದಯ ವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಸೋಮವಾರ ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ರಹಿತ ದಿನ’ ಆಚರಿಸಲಾಯಿತು.
ಈ ವೇಳೆ ವಿದ್ಯಾಲಯದ ಶಿಕ್ಷಕರು ವಿದ್ಯಾರ್ಥಿಗಳಿಗೆ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಚಟುವಟಿಕೆಗಳು, ರೈಲ್ವೇ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ರೈಲ್ವೆ ಪ್ರಯಾಣದಲ್ಲಿ ಅನುಸರಿಸಬೇಕಾದ ನಿಯಮಗಳು ಮತ್ತು ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ವೇಳೆ ’ಉದಯರಶ್ಮಿ’ ಪತ್ರಿಕೆಯೊಂದಿಗೆ ಮಾತನಾಡಿದ ನವೋದಯ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಿ.ಪಿ.ತಯಡೆ ಮಾತನಾಡಿ, ಕಳೆದ ೨೦೨೦ ರಿಂದ ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ’ಬ್ಯಾಗಲೆಸ್ ಡೇ’ ಅನುಕೂಲ ಕಲ್ಪಿಸಿದ್ದು, ಈ ದಿನ ತರಗತಿವಾರು ವಿದ್ಯಾರ್ಥಿಗಳನ್ನು ಸರಕಾರಿ ಕಚೇರಿಗಳಿಗೆ ಕರೆದುಕೊಂಡು ಹೋಗಿ ಆಯಾ ಇಲಾಖೆಯ ಸಮಗ್ರ ಪರಿಚಯ ಮಾಡಿಕೊಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಆಯಾ ಇಲಾಖೆಗಳ ಕಾರ್ಯವ್ಯಾಪ್ತಿ ಹಾಗೂ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಕಾರ್ಯದಲ್ಲಿ ವಿದ್ಯಾಲಯದ ಶಿಕ್ಷಕರಾದ ಉತ್ಕರ್ಷ ತ್ರಿಪಾಠಿ, ಎಮ್.ತಿಪ್ಪೇಸ್ವಾಮಿ, ಮೀನು ರಾವತ್, ಉಷಾ ಕಲಾಲರ ಮತ್ತು ವಿಜಯ ಕುಮಾರ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ರೈಲು ನಿಲ್ದಾಣದ ಸಮಗ್ರ ದರ್ಶನ ಮಾಡಿಸಿದರು.

