ಇಂಡಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮಾಸಿಕ ಸಭೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿಶೇಷಚೇತನರು ತಮ್ಮಿಂದಾಗುವ ಕೆಲಸವನ್ನು ಆಯ್ಕೆ ಮಾಡಿಕೊಂಡು ಅದನ್ನು ಮಾಡುವ ಮೂಲಕ ಸ್ವಾವಲಂಬನೆಯ ಬದುಕು ನಡೆಸಬೇಕು. ಪುನರ್ವಸತಿ ಕಾರ್ಯಕರ್ತರು ವಿಶೇಷ ಚೇತನರ ಪುನಶ್ಚೇತನ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ವಿಶೇಷ ಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಹೇಳಿದರು.
ಇಂಡಿ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ನಡೆದ ಚಡಚಣ ಹಾಗೂ ಇಂಡಿ ತಾಲೂಕಾ ‘ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮಾಸಿಕ ಸಭೆ’ಯ ಅಧ್ಯಕ್ಷತೆ ವಹಿಸಿ ಮತನಾಡಿದ ಅವರು, ವಿಶೇಷ ಚೇತನರು ಕೀಳರಿಮೆ ತೊರೆದು ಸ್ವಾವಲಂಭನೆ ಬದುಕು ನಡೆಸಬೇಕು. ಮಾರ್ಗದರ್ಶಿ ಕಾರ್ಯಕ್ರಮಗಳ ಸದ್ಬಳಕೆ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಸರ್ಕಾರಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತನಗಿಂತ ಹೆಚ್ಚು ನ್ಯೂನತೆ ಉಳ್ಳವರಿಗೆ ಸಹಾಯ ಮಾಡುವ ಮನಸ್ಸುಳ್ಳವರಾಗಬೇಕು ಎಂದರು.
ಈ ವೇಳೆಯಲ್ಲಿ ಇಂಡಿ ತಾಲೂಕಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪರಶುರಾಮ ಬೋಸಲೆ, ಚಡಚಣ ತಾಲೂಕಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಚಂದ್ರಕಾಂತ ಸೂರ್ಯಗಾಂವ ಚಡಚಣ ಹಾಗೂ ಇಂಡಿ ತಾಲೂಕಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.

