ಕಾರ‍್ಯಕ್ರಮದ ಸಾನಿಧ್ಯವಹಿಸಿದ ಮುಸ್ಲಿಂ ಧರ್ಮಗುರು ಡಾ.ಸೈಯದ ಎಫ್.ಎಚ್.ಇನಾಮದಾರ, ಸೈಯದ ಶಾಹಾ ಹುಸೇನಿಪೀರ ಖಾದ್ರಿ ಚಿಪ್ತಿ ಮನಗೂಳಿ ಮಾತನಾಡಿ, ನಮ್ಮ ದೇಶ ಪ್ರಜಾಪ್ರಭುತ್ವ ದೇಶ. ಇಲ್ಲಿ ಹಲವಾರು ಜಾತಿ, ಮತ, ಪಂಗಡಗಳು ವಾಸಿಸುತ್ತಿದ್ದು ಶುಭ ಅಶುಭ ಕಾರ‍್ಯಕ್ರಮಗಳಲ್ಲಿ ಒಬ್ಬರಿಗೊಬ್ಬರು ಸೇರಿಕೊಂಡು ಜೀವನ ನಡೆಸುತ್ತಿರುವುದೇ ಅಂತರಧರ್ಮೀಯ ಜೀವನ. ಹಿಂದು ಬಾಂಧವರಿಗೆ ಶ್ರಾವಣ ಮಾಸ ಪವಿತ್ರವಾದರೆ, ಮುಸ್ಲಿಂ ಬಾಂಧವರಿಗೆ ರಂಜಾನ ಮಾಸ. ಹಾಗೆಯೇ ಕ್ರೆöÊಸ್ಥ ಬಾಂಧವರು ಸಹ ಒಂದು ತಿಂಗಳ ಉಪವಾಸ ಮಾಡಿ ಗುಡ್‌ಪ್ರೆöÊಡೆ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಪ್ರತಿಯೊಂದು ಧರ‍್ಮ ಸತ್ಯ, ಶಾಂತಿಯನ್ನು ಬಯಸುತ್ತದೆ. ಹೀಗಾಗಿ ನಮ್ಮ ದೇಶ ಶಾಂತಿಯ ಹೂ ತೋಟ. ಇವತ್ತಿನ ದಿನ ರಂಜಾನ ಪ್ರಯುಕ್ತ ಅಂತರಧರ‍್ಮೀಯ ಇಪ್ತಾರ್ ಕೂಟ ಹಮ್ಮಿಕೊಂಡಿದ್ದು, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡುತ್ತದೆಂದು ತಿಳಿಸಿದರು.
ಸಂಗೀತಾ ಅಕ್ಕ ರಾಜಯೋಗಿನಿ ಬ್ರಹ್ಮಕುಮಾರಿ ಸಂಸ್ಥೆ, ಮತ್ತು ಪರಮಪೂಜ್ಯ ಫಾದರ ಪ್ರಾನ್ಸಿಸ್ ಮೆನೆಜಸ್ ಮುಖ್ಯಸ್ಥರು, ಜೆಸ್ವಿಟ್ ಸಂಸ್ಥೆಗಳು ವಿಜಯಪುರ ಇವರು ಸಹ ನಾವೆಲ್ಲರು ಭಾರತೀಯರು, ಭಾರತ ಪ್ರಜಾಪ್ರಭುತ್ವ ದೇಶ, ನಾವೆಲ್ಲರು ಅಣ್ಣ ತಮ್ಮಂದಿರ ಹಾಗೆ ಬಾಳೋಣ ಎಂದು ಸಂದೇಶವನ್ನು ನೀಡಿದರು.
ಪ್ರಾಸ್ಥಾವಿಕವಾಗಿ ಫಾದರ ಟಿಯೋಲ ಮಚಾದೊ ನಿರ‍್ದೇಶಕರು, ಅನೌಪಚಾರಿಕ ಶಿಕ್ಷಣ ಸಂಸ್ಥೆ, ಇವರು ಮಾತನಾಡಿದರು.
ಈ ಸಂದರ‍್ಭದಲ್ಲಿ ಅಕ್ರಂ ಮಾಶ್ಯಾಳಕರ, ಅಧ್ಯಕ್ಷರು ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ರಾಜೇಶ್ವರಿ ಮಠಪತಿ ಅಧ್ಯಕ್ಷರು ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ದೇಸಾಯಿ ರಾಠೋಡ, ಡಾ.ಬಾಬಾ ಸಾಹೇಬ ಅಂಬೇಡ್ಕರ ಟಾಟಾ ಏಸ್ ವಾಹನ ಚಾಲಕರ ಯೂನಿಯನ್, ರ‍್ಜಾನ ಜಮಾದಾರ ಅಧ್ಯಕ್ಷರು, ಗೃಹ ಕರ‍್ಮಿಕರ ಯೂನಿಯನ್, ವಂದನಾ ಗೆಜ್ಜಗೆ ಅಧ್ಯಕ್ಷರು ಯುವತಿಯರ ಸಂಘಗಳ ಒಕ್ಕೂಟ, ಸಿದ್ದು ಹೊನಕಟ್ಟಿ, ಅಧ್ಯಕ್ಷರು, ಕಟ್ಟಡ ಕಾರ‍್ಮಿಕರ ಯೂನಿಯನ್, ಉಮೇಶ ರುದ್ರಮುನಿ, ಅಧ್ಯಕ್ಷರು, ಮಹಾತ್ಮಾ ಗಾಂಧಿ ಆಟೋಚಾಲಕರ ಯೂನಿಯನ್, ಸೋಮನಾಥ ಬಾಂಡೇಕರ ಅಧ್ಯಕ್ಷರು, ಯುವಕ ಸಂಘಗಳ ಒಕ್ಕೂಟ ಬಾಗಿಯಾಗಿದ್ದರು.
ಕವಿತಾ ಚವ್ಹಾಣ ಸ್ವಾಗತಿಸಿದರು. ರವಿ ದೊಡಮನಿ ನಿರೂಪಿಸಿದರು, ಮುತ್ತು ಭೋವಿ ವಂದಿಸಿದರು.