ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಲೆಮರೆಯ ಕಾಯಿಯಂತೆ ಹಗಲಿರಳೆನ್ನದೇ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೇ ಆದರೆ ಜನರು ಮೆಚ್ಚುವುರಲ್ಲದೇ ಗೌರವ ಸನ್ಮಾನಗಳು ಲಭಿಸುವುದುಂಟು. ತೋರಿಕೆಗಾಗಿ ಅಥವಾ ಪ್ರಶಸ್ತಿಗಾಗಿ ಕಾಯಕ ಮಾಡದೇ ಮನಸ್ಸಿನ ತೃಪ್ತಿಗಾಗಿ ಕಾಯಕ ಮಾಡುವುದು ಲೇಸು ಎಂದು ಇತ್ತೀಚಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜಯಪುರ ಜಿಲ್ಲಾ ಘಟಕದ ಕಚೇರಿಯಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕೃತರ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರು, ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀ ಎಸ್. ವಿ. ಬುರ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬೆಂಗಳೂರು ಇವರು ನೀಡುವ “ರಾಜ್ಯ ಮಟ್ಟದ ಕಾಯಕ ರತ್ನ” ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸರೋಜಾ ಕೌಲಾಪುರ ಹಾಗೂ ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಇವರು ಶಿಕ್ಷಕ ದಿನಾಚರಣೆಯಂದು ನೀಡುವ “ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ” ಪ್ರಶಸ್ತಿ ಪುರಸ್ಕೃತರಾದ ಶ್ರೀ ರಾಜಕುಮಾರ ವಿ.ಚವ್ಹಾಣ ಇವರನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ವಿಜಯಪುರ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಶ್ರೀ ಎಸ್. ವಿ. ಬುರ್ಲಿ, ಪ್ರಧಾನ ಕಾರ್ಯದರ್ಶಿ ಆರ್. ಆರ್.ಮಿಸಾಳೆ, ಕಾರ್ಯದರ್ಶಿ ಬಿ.ಆಯ್.ಪರಂಡಿ, ಉಪಾಧ್ಯಕ್ಷ ಬಿ.ಎ. ಆಸಂಗಿ, ರಾಜಕುಮಾರ ಅರಗೆ, ಖಜಾಂಚಿ ಶ್ರೀಮತಿ ಸುಮಾ ಚೌಧರಿ, ಸದಸ್ಯರಾದ ಶ್ರೀಮತಿ ಜ್ಯೋತಿ ದೇಸಾಯಿ, ಶ್ರೀಮತಿ ರೂಪಾ ಪಡನಾಡ, ಶ್ರೀಮತಿ ಜಯಶ್ರೀ ಬುರ್ಲಿ, ಶ್ರೀ ಎ. ವಿ.ಪಾಟೀಲ, ಮಹಾದೇವ ದೇವರ, ಬಸವರಾಜ ಚೌಧರಿ ಹಾಗೂ ಇತರರು ಉಪಸ್ಥಿತರಿದ್ದರು.

