ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೆಲ್ಲರೂ ತಿಕೋಟಾ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಾಗಿ ತಹಸೀಲ್ದಾರ ಚನಗೊoಡ ಅವರನ್ನು ಸಂಪರ್ಕಿಸಿ ಸಲಹೆ ಸೂಚನೆ ನೀಡಲು ಗುರುವಾರ ವಿನಂತಿಸಿಕೊಳ್ಳಲಾಯಿತು.
ಎಲ್ಲರ ವಿಚಾರಗಳನ್ನು ತಾಳ್ಮೆಯಿಂದ ಆಲಿಸಿದ ಅವರು ತಾಲೂಕಿನ ಪ್ರಥಮ ಸಮ್ಮೇಳನ ಆಯೋಜಿಸುತ್ತಿರುವದು ತುಂಬಾ ಹೆಮ್ಮೆಯ ಸಂಗತಿ, ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಪಡುವ ಸಂಗತಿಯಾಗಿದ್ದು ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರ ತಾಲೂಕ ಆಡಳಿತ ವತಿಯಿಂದ ನೀಡಲಾಗುವದೆಂದು ಭರವಸೆ ನೀಡಿದರು.
ಪ್ರಥಮ ಸಮ್ಮೇಳನ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಲು ಮತ್ತು ವಿವಾದ ರಹಿತ ಸಮ್ಮೇಳನ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು. ತಾಲೂಕಿನ ಎಲ್ಲಾ ಕನ್ನಡ ಪರ ಸಂಘಟನೆಗಳು, ಸಂಘ ಸೌoಸ್ಥೆಗಳು,ಶಾಲಾ ಕಾಲೇಜುಗಳು, ಎಲ್ಲಾ ರಾಜಕೀಯ ಮುಖಂಡರನ್ನು, ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಆಯೋಜಿಸಲು ಸಲಹೆ ನೀಡಿದರು.
ಈ ಅನೌಪಚಾರಿಕ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಹೊನವಾಡದ ಬಾಬುರಾವ ಮಹಾರಾಜರು, ಲಿಂಗರಾಜ್ ಪಾಟೀಲ್, ಮುತ್ತು ಹಿರೇಮಠ, ಧರೆಪ್ಪ ಎಚ್ಚಿ, ಎಸ್ ಎಸ್ ಕುಂಬಾರ ಪಪ್ಪು ಹಿಪ್ಪರಗಿ ಮತ್ತು ತಿಕೋಟಾದ ಸದಾಶಿವ ಮಂಗಸೂಳಿ ಮತ್ತಿತರರು ಉಪಸ್ಥಿತರಿದ್ದರು.

