ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ ಕೆ. ರಾಠೋಡ ರವರ ೬೪ನೇ ಜನ್ಮದಿನವನ್ನು ವಿಜಯಪುರ ನಗರದ ಅನಾಥಾಶ್ರಮದಲ್ಲಿ ಕಾಂಗ್ರೆಸ್ ಎಸ್.ಸಿ. ಘಟಕ ಜಿಲ್ಲಾ ಉಪಾಧ್ಯಕ್ಷರಾದ ರಾಜು ಎಸ್.ಪವಾರ ಇವರ ಮುಖಂಡತ್ವದಲ್ಲಿ ಅನಾಥಾಶ್ರಮದ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು.
ಸುರೇಶ ರಂಗು ಚವ್ಹಾಣ (ಭೂತನಾಳ) ಮಾತನಾಡಿ ಪ್ರಕಾಶ ಕೆ. ರಾಠೋಡ ರವರು ಸಕ್ರೀಯವಾಗಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಇವರು ಪಕ್ಷದ ಕಾರ್ಯಕರ್ತರನ್ನು ಬಹಳ ಆತ್ಮೀಯವಾಗಿ ಕಾಣುತ್ತಾರೆ ಎಂದರು.
ಈ ಸಮಯದಲ್ಲಿ ಅಶೋಕ ಜಿ. ಚವ್ಹಾಣ (ಅಲಿಯಾಬಾದದ), ಸಂತೋಷ ಚವ್ಹಾಣ, ಬಾಸು ರಾಠೋಡ, ಕೃಷ್ಣಾ ಲಮಾಣಿ ಇನ್ನಿತರರು ಇದ್ದರು.

