ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸಲು ಸದಸ್ಯತ್ವ ಅಭಿಯಾನ ನೋಂದಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡ ಸದಸ್ಯತ್ವ ಅಭಿಯಾನದಲ್ಲಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಿ ಮಾತನಾಡಿದ ಅವರು, ದೇಶದಾದ್ಯಂತ ಸ್ವ-ವ್ಯಾಪಾರ ಮಾಡುವವರಿಗೆ ಪ್ರದಾನಮಂತ್ರಿ ಸ್ವನಿಧಿ ಯೋಜನೆ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಪಿಎಂ ಮೋದಿ ಅವರಿಗೆ ಬೆಂಬಲ ನೀಡಲು ತಮ್ಮ ಕುಟುಂಬದ ಸದಸ್ಯರೆಲ್ಲರೂ ಬಿಜೆಪಿ ಸದಸ್ಯತ್ವ ಪಡೆಯುವಂತೆ ಮನವಿ ಮಾಡಿಕೊಂಡರು.
ಈ ವೇಳೆ ಶ್ರೀಶೈಲಗೌಡ ಬಿರಾದಾರ ಯಂಕಂಚಿ, ಎಸ್.ಆರ್.ಪಾಟೀಲ, ಮಹಾಂತೇಶ ಸಾತಿಹಾಳ, ಎಸ್.ಎನ್ ಹಿರೇಮಠ, ಶಿವಾನಂದಗೌಡ ಪಾಟೀಲ, ರಾಜಶೇಖರ ನಗನೂರ, ಗೊಲ್ಲಾಳ್ಳಪ್ಪಗೌಟ ಪಾಟೀಲ, ಮಾಳು ಗುಡಿಹಾಳ, ಪ್ರಶಾಂತ ಕೊಪ್ಪಳ ಸೇರಿದಂತೆ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಇದ್ದರು.

