ರೂ೨೦ಲಕ್ಷ ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿ ಪೂಜೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಆ ನಿಟ್ಟಿನಲ್ಲಿ ಸಿಂದಗಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ದಿಪಡಿಸಿ ಸಿಂದಗಿ ನಗರವನ್ನು ಅತ್ಯಂತ ಸುಂದರ ನಗರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಶರಣು ಶ್ರೀಗಿರಿ ಅವರ ಮನೆಯಿಂದ ಡಾ.ಕಾಗಿ ಅವರ ಮನೆಯವರೆಗೆ ಜಿಲ್ಲಾ ಪಂಚಾಯತ್ ವಿಜಯಪುರ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಉಪವಿಭಾಗ ಸಿಂದಗಿ ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪಟ್ಟಣದ ಶರಣು ಶ್ರೀಗಿರಿ ಅವರ ಮನೆಯಿಂದ ಡಾ. ಕಾಗಿ ಅವರ ಮನೆಯವರೆಗೆ ಅಂದಾಜು ೨೦.೦೦ ಲಕ್ಷಗಳ ಅನುದಾನದಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರ ಅಭಿವೃದ್ದಿಯಾಗಲು ಮೊದಲು ರಸ್ತೆಗಳು ಉತ್ತಮವಾಗಿರಬೇಕು. ಮುಂಬರುವ ದಿನಗಳಲ್ಲಿ ಸಿಂದಗಿಗೆ ಪಟ್ಟಣದ ಎಲ್ಲ ವಾರ್ಡುಗಳ ರಸ್ತೆಗಳನ್ನು ಹಾಗೂ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.
ಈ ವೇಳೆ ಪುರಸಭೆಯ ಅಧ್ಯಕ್ಷ ಶಾಂತವೀರ ಬಿರಾದಾರ, ಸದಸ್ಯರಾದ ಹಾಸಿಂಪೀರ ಆಳಂದ, ರಾಜು ಖೇಡ್, ಸೈಫನ್ ನಾಟೀಕಾರ್, ಮಾಜಿ ಸದಸ್ಯರಾದ ಇಕಬಾಲ್ ತಲಕಾರಿ, ರಹೀಮ್ ಮರ್ತುರ, ಮೈಬೂಬ ಮರ್ತುರ, ಅಶೋಕ್ ವಾರದ, ಶರಣು ಶ್ರೀಗಿರಿ, ರಾಜಶೇಖರ ಸಂಗಮ, ಗುರು ತಾರಾಪುರ, ಶಿವಾನಂದ ಅರಳಗುಂಡಗಿ, ಮುತ್ತು ಅರಳಗುಂಡಗಿ, ವಿರೇಶ ವಸ್ತ್ರದ, ಶಾಂತಪ್ಪ ರಾಣಾಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

