ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶರಣರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ವಿಜಯಪುರದ ಶರಣ ತತ್ವ ಚಿಂತಕ ಡಾ.ಜೆ.ಎಸ್.ಪಾಟೀಲ ಹೇಳಿದರು.
ತಾಲೂಕಿನ ಹಿಕ್ಕಣಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹುಣ್ಣಿಮೆಯ ಪ್ರಯುಕ್ತ ಹಮ್ಮಿಕೊಂಡ ೭ನೆಯ ಶಿವಾನುಭವ ಕಾರ್ಯಕ್ರಮ, ಶಿವಶರಣ ಹೂಗಾರ ಮಾದಯ್ಯ ಜಯಂತಿ, ಪ್ರವಚನ ಪಿತಾಮಹ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ಜಯಂತಿ, ರಾಷ್ಟ್ರೀಯ ಬಸವದಳ ಸಂಸ್ಥಾಪನಾ ದಿನ, ಶರಣ ದಿ.ಡಾ.ಎಂ.ಎಂ.ಕಲಬುರಗಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಿಂಗಾಯತ ಮಹಾಮಠದಿಂದ ಗ್ರಾಮೀಣ ಭಾಗದಲ್ಲಿ ಶರಣರ ತತ್ವ ಆದರ್ಶಗಳನ್ನು ಪ್ರಚಾರ ಮಾಡಲಾಗುತ್ತಿರುವುದು ಹೆಮ್ಮೆಯ ಸಂಗತಿ ಭಾಗವಹಿಸಿದ ಜನರು ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಇದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ಮೂಡಿಸುವುದರಲ್ಲಿ ಸಂದೇಹವಿಲ್ಲ ಎಂದರು.
ಈ ವೇಳೆ ’ಉದಯರಶ್ಮಿ’ ವರದಿಗಾರ ಮಹಾಂತೇಶ ನೂಲಾನವರ, ಪತ್ರಕರ್ತ ಮಲ್ಲಿಕಾರ್ಜುನ ಕೆಂಭಾವಿ, ಚಂದ್ರಶೇಖರ ಕೆಂಭಾವಿ, ಗ್ಯಾರಂಟಿ ಯೋಜನೆಯ ಸದಸ್ಯೆ ಸುನಂದಾ ಯಂಪುರೆ, ಶರಣಬಸಪ್ಪ ಗಂಗಶೆಟ್ಟಿ, ಕಾಶೀನಾಥ ಸುಳ್ಳೋಳ್ಳಿ ಸೇರಿದಂತೆ ಅನೇಕರಿಗೆ ಬಸವ ಶ್ರೀರಕ್ಷೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಭುಲಿಂಗ ಶರಣರು, ಚಿಂಚೋಳ್ಳಿಯ ಶ್ರೀ ಕಲ್ಲಾಲಿಂಗೇಶ್ವರ ಮಠದ ಶರಣಬಸವ ಶರಣರು ಸಾನಿಧ್ಯ ವಹಿಸಿದ್ದರು. ಅಫಜಲಪೂರದ ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ ಚಾಂದಕವಟೆ ಉಪನ್ಯಾಸ ನೀಡಿದರು. ಮಲ್ಲನಗೌಡ ಪಾಟೀಲ, ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಜಗದೀಶ ಕಲಬುರಗಿ, ಡಾ.ಬಸವರಾಜ ಹೂಗಾರ, ಶ್ರೀಶೈಲ ಹೂಗಾರ, ಅಶೋಕ ಹೂಗಾರ, ಡಾ.ಚಂದ್ರಶೇಖರ ಹೂಗಾರ, ಸಂತೋಷ ಹೊಟಗಾರ, ರವಿಕುಮಾರ ಮಸಳಿ, ಸೈನಾಬಿ ಮಸಳಿ, ಬಸವರಾಜ ಹೂಗಾರ, ಮಹಾಂತೇಶ ನಾಗೋಜಿ, ಸಾಹೇಬಗೌಡ ಮುಳಸಾವಳಗಿ, ಮಲಕಣ್ಣ ತಳವಾರ, ಸಂಗಣ್ಣ ಬ್ಯಾಕೋಡ ಸೇರಿದಂತೆ ಶ್ರೀಮಠದ ಭಕ್ತರು, ಗ್ರಾಮಸ್ಥರು, ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

