ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹುಣ್ಣಿಮೆಯ ಪ್ರಯುಕ್ತ ಹಮ್ಮಿಕೊಂಡ ೭ನೆಯ ಶಿವಾನುಭವ ಕಾರ್ಯಕ್ರಮ, ಶಿವಶರಣ ಹೂಗಾರ ಮಾದಯ್ಯ ಜಯಂತಿ, ಪ್ರವಚನ ಪಿತಾಮಹ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ಜಯಂತಿ, ರಾಷ್ಟ್ರೀಯ ಬಸವದಳ ಸಂಸ್ಥಾಪನಾ ದಿನ, ಶರಣ ದಿ.ಡಾ.ಎಂ.ಎಂ.ಕಲಬುರಗಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಮಹಾಂತೇಶ ನೂಲಾನವರ ಅವರಿಗೆ ಬಸವ ಶ್ರೀರಕ್ಷೆ ನೀಡಿ ಗೌರವಿಸಲಾಯಿತು.

