Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜುಲೈ 19 ರಂದು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 16, 2026

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಜಿಲ್ಲಾ ಪ್ರವಾಸ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬೇಡಿ :ಸಂಸದ ಜಿಗಜಿಣಗಿ
(ರಾಜ್ಯ ) ಜಿಲ್ಲೆ

ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬೇಡಿ :ಸಂಸದ ಜಿಗಜಿಣಗಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಇಂಡಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖಾಂತರ ಎರಡು ಕೋಟಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ೧೩ ಕೋಣೆಗಳ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು ನನ್ನ ಆತ್ಮಕ್ಕೆ ಸಂತೃಪ್ತಿ ತಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಬುಧವಾರ ತಾಲೂಕಿನ ಗುಂದವಾನ ಗ್ರಾಮದಲ್ಲಿ ಎನ್.ಎಚ್.ಎ ಅನುದಾನದದಡಿಯಲ್ಲಿ ನಿರ್ಮಿಸಿದ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಈ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಆಗಬೇಕಿತ್ತು. ಆದರೆ ಕೆಲವರು ಅದಕ್ಕೆ ಅಡ್ಡಗಾಲು ಹಾಕಿ ಕಾರ್ಯಕ್ರಮ ಮಾಡಲೇಬಾರದು ಎಂದು ಗುಂದವಾನ ಗ್ರಾಮದ ಹಲವರಿಗೆ, ಪಂಚಾಯತ್‌ನವರಿಗೆ ಹೇಳಿದ ಪರಿಣಾಮ ಇಲ್ಲಿ ಹೆಚ್ಚಿನ ಜನ ಸೇರಲಿಲ್ಲ ಎಂದೂ ಸಹ ನನಗೆ ಗೊತ್ತಿದೆ. ಅಭಿವೃದ್ಧಿಯಲ್ಲಿ ಎಂದೂ ರಾಜಕಾರಣ ಮಾಡಬಾರದು. ಅದನ್ನು ಮೊದಲು ವಿರೋಧಿಗಳು ಅರಿತುಕೊಳ್ಳಬೇಕು. ನಾನು ಈ ಕಾರ್ಯ ಮಾಡಿದ್ದು ನನಗೆ ಸಂತಸ ತಂದಿದೆ. ಜಿಲ್ಲೆಗೆ ಒಂದು ಲಕ್ಷ ಹತ್ತು ಸಾವಿರ ಕೋಟಿ ರೂಪಾಯಿ ಅನುದಾನ ತಂದರೂ ಸಹ ನಾನು ನನ್ನ ಭಾವಚಿತ್ರವನ್ನು ಎಲ್ಲಿಯೂ ಹಚ್ಚಿಕೊಂಡಿಲ್ಲ. ನನಗೆ ಜನರ ಸೇವೆ ಮಾಡುವುದೊಂದೇ ಗುರಿ, ಆ ಕಾರ್ಯಗಳೇ ಇದನ್ನು ಜಿಗಜಿಣಗಿ ಅವರು ಮಾಡಿದ್ದು ಎಂದು ಹೇಳುತ್ತವೆ ಎಂದರು.
ನಾನು ಕಳೆದ ಬಾರಿ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೆ, ಆದರೆ ಪಕ್ಷದ ಮುಖಂಡರು ಕಾರ್ಯಕರ್ತರು ಆ ಮಾತಿಗೆ ಒಪ್ಪಿಗೆ ನೀಡುತ್ತಿಲ್ಲ. ನನಗೂ ಸಹ ಇನ್ನೂ ಮುಂದೆ ಗುರಿ ಇದೆ. ಮುಂದೆಯೂ ಪಕ್ಷ ಬಯಸಿದರೆ ಮತ್ತೆ ಅಖಾಡಕ್ಕೆ ಧುಮ್ಮಿಕ್ಕಲಿದ್ದೇನೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಗ್ರಾಮದ ಅತ್ತಾರ ಪಟೇಲ ಮಾತನಾಡಿ, ಸಂಸದರು ಇಂತಹ ಅಭೂತಪೂರ್ವ ಕಾರ್ಯ ಮಾಡಿದ್ದಾರೆ. ಇಂತಹ ಅಭಿವೃದ್ಧಿ ಕಾರ್ಯಗಳ ಪೂಜೆಗೂ ಸಹ ಅಡ್ಡಗಾಲು ಹೊಡೆಯುವ ರಾಜಕಾರಣ ಮಾಡುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.
ವೇದಿಕೆಯಲ್ಲಿ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎ. ನಾಯಕ, ಜ್ಞಾನೇಶ್ವರ ಠೋಕೆ, ಎಲ್.ಡಿ. ವಾಲೀಕಾರ ಸಿದ್ದಲಿಂಗ ಖಾನಾಪುರ, ಮಹಾದೇವ ಕದರಿ, ಎ.ಎಂ. ಪಾಟೀಲ, ಚಂದ್ರಕಾಂತ ಪೂಜಾರಿ, ಸಿದ್ದನಗೌಡ ಪಾಟೀಲ, ಆರ್.ಎಸ್. ರುದ್ರವಾಡಿ ರಾಘವೇಂದ್ರ ಕಾಪಸೆ, ಸಾಹೇಬಗೌಡ ಚೌದರಿ, ಮಹಾದೇವಿ ವಾಲಿಕಾರ, ಎಂ.ಎಂ. ಗಬಸಾವಳಗಿ, ದೇವೇಂದ್ರ ಕುಂಬಾರ, ಸೇರಿದಂತೆ ಇನ್ನಿತರರು ಇದ್ದರು.

“ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೃತರಾದಾಗ ಆಗಿನ ಕಾಂಗ್ರೇಸ್ ಸರಕಾರ ದೆಹಲಿಯಲ್ಲಿ ಅವರಿಗೆ ಹೂಳಲು ೬ ಅಡಿ ಸ್ಥಳ ನೀಡಲಿಲ್ಲ. ಈಗ ನಮ್ಮ ಬಿಜೆಪಿ ಸರಕಾರ ಅಂಬೇಡ್ಕರ್ ಅವರು ಹುಟ್ಟಿ ಬೆಳೆದ ಮನೆ ಸೇರಿದಂತೆ ಅವರು ಕಲಿತ ಶಾಲೆ, ಸೇರಿ ಒಟ್ಟು ೭ ಸ್ಥಳಗಳನ್ನು ನಮ್ಮ ಸರಕಾರ ಅಭಿವೃಧ್ಧಿಪಡಿಸಿ ಪ್ರೇಕ್ಷಣೀಯ ಸ್ಥಳವನ್ನಾಗಿಸಿದೆ. ೭೦ ವರ್ಷ ರಾಜಕಾರಣ ಮಾಡಿದ ಕಾಂಗ್ರೇಸ್ ಪಕ್ಷಕ್ಕೆ ದೇಶದ ಜನರಿಗೆ ಶುಧ್ಧ ಕುಡಿಯುವ ನೀರು ಕೊಡುವುದು ಸಾಧ್ಯವಾಗಿರಲಿಲ್ಲ. ಮೋದಿ ಸರಕಾರ ಈಗ ದೇಶಾದ್ಯಂತ ಜನರಿಗೆ ಶುಧ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದೆ. ಕೇಂದ್ರ ಸರಕಾರದ ಅನುದಾನದ ಕಾಮಗಾರಿಗಳಿಗೆ ನನ್ನನ್ನು ಆಹ್ವಾನಿಸದೇ ನೀವೆ-ಕಾಮಗಾರಿಗಳ ಪೂಜೆ ಮಾಡಿದ್ದೀರಿ, ಆದರೆ ನಾನು ಕೆಲವೊಂದೇ ಅಭಿವೃಧ್ಧಿ ಕಾಮಗಾರಿಗಳಿಗೆ ಪೂಜೆ ಮಾಡಲು ಹೊರಟರೆ ಅದನ್ನು ಏಕೆ ತಡೆಯಲು ಪ್ರಯತ್ನಿಸುತ್ತೀರಿ?”

– ರಮೇಶ ಜಿಗಜಿಣಗಿ
ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜುಲೈ 19 ರಂದು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 16, 2026

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಜಿಲ್ಲಾ ಪ್ರವಾಸ

ಟೌನ್ ಶಿಪ್ ಯೋಜನೆ ರದ್ದುಗೊಳ್ಳುವರೆಗೂ ವಿಧಾನಸೌಧದೊಳಗೆ ಧರಣಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜುಲೈ 19 ರಂದು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 16, 2026
    In ಆರೋಗ್ಯ
  • ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಟೌನ್ ಶಿಪ್ ಯೋಜನೆ ರದ್ದುಗೊಳ್ಳುವರೆಗೂ ವಿಧಾನಸೌಧದೊಳಗೆ ಧರಣಿ
    In (ರಾಜ್ಯ ) ಜಿಲ್ಲೆ
  • ಮಾದಕ ದ್ರವ್ಯ ಮುಕ್ತ ಸಮಾಜಕ್ಕೆ ಆರಕ್ಷಕರ ಸಂಕಲ್ಪ
    In (ರಾಜ್ಯ ) ಜಿಲ್ಲೆ
  • ಗಾನಕೋಗಿಲೆ ಎಸ್.ಜಾನಕಿಗೆ ಭಾವಪೂರ್ಣ ನುಡಿ ನಮನ
    In (ರಾಜ್ಯ ) ಜಿಲ್ಲೆ
  • 4 ತಿಂಗಳಿಂದ ಮುಗಿಯದ ದೇವಣಗಾಂವ ಸೇತುವೆ ದುರಸ್ತಿ
    In (ರಾಜ್ಯ ) ಜಿಲ್ಲೆ
  • ಅಕ್ರಮ ಮರಳು ಸಾಗಾಟದ ಟ್ರ‍್ಯಾಕ್ಟರ್ ವಶ :ಚಾಲಕ ಪರಾರಿ
    In (ರಾಜ್ಯ ) ಜಿಲ್ಲೆ
  • ಸಾವಿನ ಮನೆಗೆ ಸಾಂತ್ವನ ಕಾರ್ಯಕ್ರಮ ಮೂಲಕ ನೊಂದವರಿಗೆ ನೆರವು
    In (ರಾಜ್ಯ ) ಜಿಲ್ಲೆ
  • ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ನಡೆದ ರೈತರ ಹೋರಾಟ ಯಶಸ್ವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.