ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಾ.ಸಿದ್ಧಲಿಂಗಯ್ಯ ಕಾವ್ಯ, ವಿಮಶ೯ಕ, ನಾಟಕ, ಪ್ರಬಂಧ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಕವಿ ಸಿದ್ದಲಿಂಗಯ್ಯ ರಾಷ್ಟ್ರಕವಿಗಳ ಸಾಲಿನಲ್ಲಿ ಸೇರಬೇಕಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ಜೈ ಭೀಮ ಸೇನಾ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದಿ ಡಾ.ಸಿದ್ಧಲಿಂಗಯ್ಯ ಅವರ ನಾಲ್ಕನೆಯ ಪುಣ್ಯ ಸ್ಮರಣೋತ್ಸವದ ನಿಮಿತ್ತ ನುಡಿನಮನ ಕಾಯ೯ಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರ ಚಿಂತನೆಗಳು ಇಪ್ಪತ್ತೊಂದನೆಯ ಶತಮಾನದ ಯುವಕರಿಗೆ ಸ್ಪೂರ್ತಿದಾಯಕವಾಗಿವೆ ಎಂದರು.
ಜಿಲ್ಲಾ ಕಸಾಪ ಸಂಘಟನಾ ಕಾಯ೯ದಶಿ೯ ಅಭಿಷೇಕ ಚಕ್ರವರ್ತಿ ಮಾತನಾಡಿ, ಕವಿ ಸಿದ್ದಲಿಂಗಯ್ಯ ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯ ರಚಿಸಿ ಜನಪ್ರಿಯರಾಗಿದ್ದರು. ಡಾ ಅಂಬೇಡಕರ, ಪೆರಿಯಾರ, ವಸುದೇವಭೂಪಾಲ,ಲೋಹಿಯಾ ಮುಂತಾದವರ ವಿಚಾರಗಳಿಂದ ಆಕರ್ಷಿತರಾಗಿದ್ದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕರಾದ ಡಾ ಸಂಗಮೇಶ ಮೇತ್ರಿ ಮಾತನಾಡಿ, ಕವಿ ಸಿದ್ದಲಿಂಗಯ್ಯ ಅವರ ಏಕಲವ್ಯ ನಾಟಕ ಪ್ರಸಿದ್ಧಿ ಪಡೆದುಕೊಂಡಿತು. ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ ಶತಮಾನೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ನಾಡಿನ ಕೀರ್ತಿ ಬೆಳಗಿಸಿದರು ಎಂದರು.
ಮುಖ್ಯ ಅತಿಥಿಗಳಾದ ಅಲಿಸಾಬ ಖಡಕೆ, ಡಾ ಸುರೇಖಾ ರಾಠೋಡ, ಸುಭಾಷ ನಾಯ್ಕೋಡಿ, ರಘನಾಥ ಬಾಣಿಕೋಲ ಮಾತನಾಡಿದರು.
ಕಾಯ೯ಕ್ರಮ ಸಂಘಟಕ ಸಂತೋಷ ಭಾಸ್ಕರ ಸ್ವಾಗತಿಸಿದರು.
ಪ್ರೊ.ನಾರಾಯಣ ಪವಾರ, ದೇವದಾಸ ತೊರವಿ, ಯಶವಂತ ದೊಡಮನಿ, ಬಸವರಾಜ ಹಾದಿಮನಿ, ಸತೀಶ ಗುಡ್ಡೋಡಗಿ, ಪರುಶರಾಮ ಮಾದರ,
ರಮೇಶ ಕರಾಬಿ, ಅಶೋಕ ನಾಯ್ಕೋಡಿ, ಪರಸಪ್ಪಾ ವಾಲಿಕಾರ,
ಅಶೋಕ ನಂದಿಹಾಳ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಸವರಾಜ ಲಗಳಿ, ಇಪಾ೯ನ ಬೀಳಗಿ, ರವಿ ಬಿಸನಾಳ, ಸಾಗರ ಕಾಂಬಳೆ, ಡಾ.ಮಹಿಬೂಬ ಮಾಲಬಾವಡಿ, ಡಾ.ಸಿದ್ದು ಕಲ್ಲೂರ. ಲಿಂಗರಾಜ ಬಳ್ಳಾರಿ, ಜೈ ಬೀಮ ನಾಯ್ಕೋಡಿಯವರಿಗೆ ಗೌರವ ಸನ್ಮಾನ ಮಾಡಲಾಯಿತು.

