ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲ್ಲೂಕು ಆಡಳಿತದಿಂದ ವಿಶ್ವಕರ್ಮ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಸರಳವಾಗಿ ಆಚರಿಸಲಾಯಿತು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಸಮುದಾಯದ ಯೋಗೇಂದ್ರ ಮೂರುಜಾವದಮಠ ಶಾಸ್ತ್ರೋಕ್ತ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಕರ್ಪೂರ, ಮಂಗಳಾರತಿ ನೆರವೇರಿಸಿ ಪ್ರಸಾದ, ಪನಿವಾರ ವಿತರಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪಿ.ಬಿರಾದಾರ ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ ವಿಶ್ವಕರ್ಮರ ಹಿನ್ನೆಲೆ , ಕಾರ್ಯವೈಖರಿ, ಈಶ್ವರನಿಗೆ ತ್ರಿಶೂಲ, ಶ್ರೀಕೃಷ್ಣನಿಗೆ ದ್ವಾರಕಾನಗರ, ರಾವಣನಿಗೆ ಅರಮನೆ, ಕಾರ್ತಿಕೇಯನಿಗೆ ಭರ್ಜಿಯನ್ನು ನಿರ್ಮಿಸಿದ ಬಗೆಯ ಮಾಹಿತಿ ಸಹಿತ ದೇವಾನುದೇವತೆಗಳನ್ನು ಮೂರ್ತರೂಪಕ್ಕೆ ತಂದದನ್ನು ವಿವರಿಸಿ ಮಾತನಾಡಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಅಮೋಘಸಿದ್ದ ದಳವಾಯಿ, ಕುಮಾರ ಅವರಾದಿ, ಚನ್ನಬಸು ಹೊಸಮನಿ, ಕಿಶೋರ ರಾಠೋಡ, ಆಕಾಶ ಮೇತ್ರಿ, ಪಟ್ಟಣದ ವಿಶ್ವಕರ್ಮ ಸಮುದಾಯದ ವಿಶ್ವನಾಥ ಮೂರುಝಾವದಮಠ, ನಾಗಯ್ಯ ಮೂರುಝಾವದಮಠ, ತೇಜಪ್ಪ ಕಕ್ಕಳಮೇಲಿ, ದೇವೀಂದ್ರಪ್ಪ ಕಕ್ಕಳಮೇಲಿ, ಮಹಾರುದ್ರ ಕಕ್ಕಳಮೇಲಿ, ಪ್ರಶಾಂತ ದೊಡಮನಿ, ಸುರೇಶ ಬಡಿಗೇರ, ಪ್ರವೀಣ ಬಡಿಗೇರ, ರಾಜು ಪತ್ತಾರ(ಮಿರಗಿ), ಸಂತೋಷ ಬಡಿಗೇರ, ಸಂತೋಷ ಪತ್ತಾರ, ಕೃಷ್ಣಯ್ಯ ಪಂಚಾಳಮಠ ಇದ್ದರು.

