Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಕ್ಕಳಲ್ಲಿ ಕ್ರೀಡಾ ಕಾರ್ಯಕ್ಷಮತೆ ಬೆಳೆಸಿ :ಪಂಚಾಕ್ಷರಿ ನಂದೀಶ
(ರಾಜ್ಯ ) ಜಿಲ್ಲೆ

ಮಕ್ಕಳಲ್ಲಿ ಕ್ರೀಡಾ ಕಾರ್ಯಕ್ಷಮತೆ ಬೆಳೆಸಿ :ಪಂಚಾಕ್ಷರಿ ನಂದೀಶ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಕ್ಕಪಡಸಲಗಿಯಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಯಶಸ್ಸು

ಉದಯರಶ್ಮಿ ದಿನಪತ್ರಿಕೆ

ಚಿಕ್ಕಪಡಸಲಗಿ: ಆರೋಗ್ಯ ಸಂಪನ್ನತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು ಆ ದಿಸೆಯಲ್ಲಿ ಮಕ್ಕಳಲ್ಲಿ ಕ್ರೀಡಾ ಕಾರ್ಯಕ್ಷಮತೆ ಬೆಳೆಸಲು ದೈಹಿಕ ಶಿಕ್ಷಣ ಶಿಕ್ಷಕರು ಮುಂದಾಗಬೇಕು ಎಂದು ಜಮಖಂಡಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ಪಂಚಾಕ್ಷರಿ ನಂದೀಶ ಹೇಳಿದರು.
ಗ್ರಾಮದಲ್ಲಿ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆ ವತಿಯಿಂದ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ 2024-25 ನೇ ಸಾಲಿನ ಹಿರೇಪಡಸಲಗಿ ವಲಯ ಮಟ್ಟದ 14 ವಯೋ ಮಿತಿಯೊಳಗಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ, ದೈಹಿಕ ಸಾಮರ್ಥ್ಯ ಗಟ್ಟಿಗೊಳ್ಳುತ್ತದೆ. ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸ್ಪಧಾ೯ತ್ಮಕ ಮನೋಭಾವದಿಂದ ಆಟವನ್ನಾಡಿ ಕ್ರೀಡಾ ಪ್ರೇಮಭಾವ ಅರಳಿಸುವುದೇ ಬಹುಮುಖ್ಯ. ಸತತ ಪ್ರಯತ್ನ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತನೆ ಹೊಂದುತ್ತವೆ. ಕ್ರೀಡಾರಂಗದಲ್ಲಿಂದು ಗ್ರಾಮೀಣ ಪ್ರದೇಶದ ಪ್ರತಿಭಾವಂತ ಪ್ರತಿಭಗಳು ಹೊರಹೊಮ್ಮತ್ತಿವೆ. ಅವರಿಗೆ ಇನ್ನಷ್ಟು ಸೂಕ್ತ ಪ್ರೋತ್ಸಾಹ ಸಮಾಜದಿಂದಲೂ ದೊರಕಬೇಕು ಎಂದರು.
ಹಿರೇಪಡಸಲಗಿ ಸಿಆರ್ ಪಿ ಆರ್.ಎಚ್.ಮುದ್ನೂರ ಮಾತನಾಡಿ, ವಯಕ್ತಿಕ ಸಾಧನೆ, ಕೀತಿ೯ ಹೆಚ್ಚಿಸಲು ಕ್ರೀಡಾಕೂಟಗಳು ಅತ್ಯುತ್ತಮ ವೇದಿಕೆಯಾಗಿದೆ. ಕ್ರೀಡಾಸಕ್ತಿ ಮೈಗೂಡಿಸಿಕೊಳ್ಳುವ ಮಕ್ಕಳು ಉತ್ತಮ ಆರೋಗ್ಯ ಸಂಪಾದಿಸುತ್ತಾರೆ. ಕ್ರೀಡಾ ಒಲವಿನಿಂದ ಆಟಗಳಲ್ಲಿ ಗೆಲವು ಕಾಣಬೇಕು. ಆಟೋಟಗಳ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.
ಕ್ರೀಡಾ ಪ್ರಮಾಣ ವಚನ ಬೋಧಿಸಿದ ವಿಶ್ರಾಂತ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ, ಮಕ್ಕಳು ಕ್ರೀಡಾ ಮನೋಭಾವ ಸಕಾರಾತ್ಮಕವಾಗಿ ಸ್ವೀಕರಿಸಿ ಗೆಲುವಿನ ದಾರಿ ಕಂಡುಕೊಳ್ಳಬೇಕು. ಕ್ರೀಡಾ ಸ್ಪೂರ್ತಿಯೇ ನಿಮಗೆ ಗೌರವ ತಂದು ಕೊಡಬಲ್ಲದು. ವ್ಯಕ್ತಿತ್ವಕ್ಕೆ ಮೆರುಗು ನೀಡಬಲ್ಲದು. ದೈಹಿಕ ಚೈತನ್ಯ ವೃದ್ಧಿಸಬಲ್ಲದು ಎಂದು ಕ್ರೀಡಾ ಉತ್ಸಾಹಿ ಮಕ್ಕಳಿಗೆ ಸಲಹೆ ನೀಡಿದರು.
ಕ್ರೀಡಾ ಜ್ಯೋತಿ ಸ್ವಾಗತಿಸಿದ ಜಮಖಂಡಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಪಿ.ಬಿ.ಅಜ್ಜನ್ನವರ ಮಾತನಾಡಿ, ವಿದ್ಯಾರ್ಥಿಗಳ ಏಕಾಗ್ರತೆಗೆ ಕ್ರೀಡೆಗಳು ಸಹಕಾರಿಯಾಗಿವೆ. ಮೊಬೈಲ್ ವ್ಯಾಮೋಹ ಕಡಿತಗೊಳಿಸಿ ಕ್ರೀಡಾ ಕ್ಷೇತ್ರದ ಅರಿವು ಮೂಡಿಸಿಕೊಳ್ಳಬೇಕು. ಶೈಕ್ಷಣಿಕ ವಿದ್ಯೆ ಜೊತೆಗೆ ಕ್ರೀಡಾ ರಂಗದ ಕೌಶಲ್ಯ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಯುವ ಬಾಲ ಕ್ರೀಡಾಪಟುಗಳಿಗೆ ಕರೆಯಿತ್ತರು.
ಅಧ್ಯಕ್ಷತೆ ವಹಿಸಿದ್ದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ಮಕ್ಕಳಿಗೆ ಪ್ರೋತ್ಸಾಹ, ಪ್ರೇರಣೆ ಲಭಿಸಬೇಕು. ಕ್ರೀಡೆಗಳಿಗೂ ಮಹತ್ವ ನೀಡಬೇಕು. ಹೀಗಾದಾಗ ಯುವ ಮನಗಳ ಶೈಕ್ಷಣಿಕ ಪ್ರಗತಿ ಸಾಧ್ಯ. ಪ್ರತಿ ಮಗುವಿನಲ್ಲೂ ಒಂದಿಲ್ಲೊಂದು ಪ್ತತಿಭೆಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಗುರುತಿಸಬೇಕು. ಪೋಷಕರು, ಶಿಕ್ಷಕರು ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು. ಅಂದಾಗ ಮಕ್ಕಳ ಪ್ರತಿಭೆ ಉನ್ನತಿ ಕಾಣಲು ಸಾಧ್ಯವಾದೀತೆಂದು ಅಭಿಪ್ರಾಯಿಸಿದರು.
ಬಸವರಾಜ ಜಾಲೋಜಿ ಮಾತನಾಡಿದರು.
ಬಾಹುಬಲಿ ಮುತ್ತೂರ, ಜೈಪಾಲ ದೈಗೊಂಡ, ಶರಣಪ್ಪ ಅರೆವ್ವಗೋಳ, ಬಾಹುಬಲಿ ನ್ಯಾಮಗೌಡ, ಸದಾಶಿವ ಪಕಾಲಿ, ದಿನೇಶ ಪಾಟೀಲ, ಕುಮಾರ ವಾಣಿ, ರವಿ ಬಂದರ, ರಾಜು ನ್ಯಾಮಗೌಡ, ಮುತ್ತಗಿ, ಜಮಾದಾರ, ಬಾಂಗಿ ಇತರರು ದೈಹಿಕ ಶಿಕ್ಷಕರು ನಿಣಾ೯ಯಕರಾಗಿ ಕಾರ್ಯನಿರ್ವಹಿಸಿದರು.
ಹರಳಯ್ಯ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಆಂಗ್ಲ ಮಾದ್ಯಮ ಶಾವೆ ಸಿಬ್ಬಂದಿಗಳು ಸ್ಕೋರರಗಳಾಗಿ ಉತ್ತಮ ರೀತಿಯಲ್ಲಿ ಕಾಯಕ ಗೈದರು.
ಬಿಸಿಯೂಟದ ಸಿಬ್ಬಂದಿಗಳು ರುಚಿಕಟ್ಟಾದ ಭೋಜನದ ವ್ಯವಸ್ಥೆ ಕೈಗೊಂಡರು.
ಶಿಕ್ಷಕರಾದ ಸುರೇಶ ಸಂತಿ ಹಾಗೂ ಲೋಹಿತ ಸಂತಿ ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳ ಕೊಡುಗೆ ನೀಡಿ ಸೇವಾಭಾವದ ಔದಾರ್ಯತೆ ಮೆರೆದರು.
ಕುಮಾರಿ ಸ್ನೇಹಾ ಸಿದ್ದಾಪುರ ಪ್ರಾರ್ಥನೆ ಗೀತೆ ಸುಶ್ರಾವ್ಯವಾಗಿ ಹಾಡಿದರು. ಶಿಕ್ಷಕ ಸದಾಶಿವ ಸಿದ್ದಾಪುರ ಸ್ವಾಗತಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.