ವಿಜಯಪುರದ ಪಿಡಿಜೆ ‘ಬ’ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ | ನಿವೃತ್ತ ಸಿಬ್ಬಂದಿಗೆ ಸನ್ಮಾನ |
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಹಿ ಜ್ಞಾನೇನ ಸದೃಶಂ ಪ್ರವಿತ್ರಮಿಹ ವಿದ್ಯತೆ ಎಂಬ ನಾನ್ನುಡಿಯಂತೆ ೨೦೨೩-೨೪ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವು ಪಿಡಿಜೆ ‘ಬ’ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು.
ಈ ಸಮಾರಂಭ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಜಿ. ಗೆಣ್ಣೂರ ಅವರು ಮಾತನಾಡಿ, ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾದರೂ ದೃತಿಗೆಡದೆ ಗಮನಹರಿಸಿದರೆ ಮಾತ್ರ ಯಶಸ್ಸು ಸಾಧ್ಯ. ಯಶಸ್ಸಿನ ಮೊದಲ ಹೆಜ್ಜೆ ಎಂದರೆ ಸತತ ಪ್ರಯತ್ನ. ದೃಢವಾದ ಆತ್ಮವಿಶ್ವಾಸ ಹಾಗೂ ಸಂಸ್ಕಾರದಿಂದ ಕೂಡಿದರೆ ಮಾತ್ರ ಸಂಪೂರ್ಣವಾದ ಜಗತ್ತನ್ನೇ ಗೆಲ್ಲಬಹುದು. ಹಾಗೂ ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ಯಶಸ್ಸು ಎಂಬುದು ಒಮ್ಮೆ ಮಾತ್ರ ನಿಮ್ಮ ಮನೆಯ ಬಾಗಿಲನ್ನು ತಟ್ಟುತ್ತದೆ ಎಂಬುದನ್ನು ನೆನಪಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ ಪ್ರಶಾಂತ ಎಸ್,ಚನಗೊಂಡ ಮಾತನಾಡಿ, ವಿದ್ಯಾರ್ಥಿಗಳು ಸತತವಾದ ಪ್ರಯತ್ನದಿಂದ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಬಹುದೆಂದು ಹೇಳಿದರು.
ಬಿಡಿಈ ಸಂಸ್ಥೆಯ ಅಧ್ಯಕ್ಷ ಕೆ ಬಿ ಕುಲಕರ್ಣಿ ಮಾತನಾಡಿ, ಸಾಧಿಸಿಯೇ ಸಾಧಿಸುತ್ತೇನೆ ಎಂಬ ಇಚ್ಚೆಯುಳ್ಳ ಮನಸ್ಸಿನ ಮುಂದೆ ಬಡತನ ಸಿರಿತನ ಎಂಬ ಯಾವುದೇ ಅಡತಡೆಗಳು ನಿಲ್ಲಲಾರವು. ಹಾಗೆಯೇ ಕೆಸರಿನಲ್ಲಿ ಕಮಲ ಅರಳುವುದು ಎಷ್ಟು ಸತ್ಯವೋ ಪರಿಶ್ರಮವಿದ್ದಲ್ಲಿ ಪ್ರತಿಭೆಗಳು ಅರಳುವುದು ಅಷ್ಟೇ ಸತ್ಯ. ಹಾಗೂ ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಬಹಳ ಮುಖ್ಯವಾದದ್ದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಿಡಿಈ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಖ್ಯಾತ ನ್ಯಾಯವಾದಿ ಎಂ ಕೆ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬಿಡಿಈ ಸಂಸ್ಥೆಯ ಉಪಾಧ್ಯಕ್ಷ ಎ. ಡಿ. ದೇಶಪಾಂಡೆ, ಜಂಟಿ ಕಾರ್ಯದರ್ಶಿ ಆರ್. ಪಿ. ಚಿಕ್ಕಲಕಿ, ಬಿಡಿಈ ಸದಸ್ಯರಾದ ಕೃಷ್ಣಾ ಗಲಗಲಿ ಹಾಗೂ ಡಾ. ರಾಹುಲ ಕೆಂಭಾವಿ ಹಾಗೂ ಬಿ.ಡಿ.ಈ ಸಂಸ್ಥೆಯ ಎಲ್ಲ ಸದಸ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪಿಡಿಜೆ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಡಿ.ಕೆ. ಕುಲಕರ್ಣಿ ಮೇಡಂ ಅವರು ಹಾಗೂ ಪಿ.ಡಿ.ಜಿ ಪ್ರೌಢಶಾಲೆ “ಬ” ಮುಖ್ಯಾಧ್ಯಾಪಕಿಯರಾದ ಶ್ರೀಮತಿ ಕೆ.ಎಂ. ಸೀತಿಮನಿ ಗುರುಮಾತೆಯವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಿವೃತ್ತ ಸಿಬ್ಬಂಧಿ ವರ್ಗದವರಿಗೂ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಎಸ್.ಜಿ.ಹೊನಕೇರಿ, ಎಸ್.ಆರ್.ಜೋಶಿ, ಬಿ.ಎಚ್. ವಾಲಿಕಾರ, ಎಸ್.ಎಮ್.ಹಲಗಣಿ, ಹಾಗೂ ಎಮ್.ಎನ್. ಬಾಬರ ಪರಿಚಯಿಸಿದರು. ಎ.ಎಮ್.ಮಾಂಗ ಎ.ಎನ್.ಉಮ್ಮವಗೋಳ, ಎನ್.ಎಸ್. ರಘುವೀರ, ಜಿ.ಜಿ. ಗಾಡಗೀಳ, ಎ.ಎಮ್.ಹಿರೇಮಠ, ಪಿ.ಕೆ. ಆಶ್ರೀತ, ಎ.ಎನ್. ಜಕ್ಕುಂಡಿ, ಎ.ಜಿ. ಕೋಲಟಕರ. ಆರ್.ಆರ್.ಉಪ್ಪಾರ, ಉಪಸ್ಥಿತರಿದ್ದರು. ಆಯ್.ಎನ್.ಧರಿಕಾರ, ಮತ್ತು ಎಸ್.ಆರ್. ಕುಲಕರ್ಣಿ, ಕಾಯಕ್ರಮವನ್ನು ನಿರೂಪಿಸಿದರು. ಎಸ್.ಎಸ್.ಗಾಣಿಗೇರ ವಂದಿಸಿದರು.

