ಉದಯರಶ್ಮಿ ದಿನಪತ್ರಿಕೆ
ಢವಳಗಿ: ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ಶ್ರೀ ವಿಶ್ವಕರ್ಮ ಜಯಂತಿಯನ್ನು ಭಗವಾನ್ ಶ್ರೀ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯಗುರು ರಮೇಶ ಮೂಲಿಮನಿ ಅವರು ಮಕ್ಕಳಿಗೆ ವಿಶ್ವಕರ್ಮ ಜಯಂತಿಯ ಬಗ್ಗೆ ವಿವರವಾಗಿ ಹೇಳಿದರು. ಇದೇ ವೇಳೆಯಲ್ಲಿ ಸಹ ಶಿಕ್ಷಕರಾದ ಜೆ ಎಸ್ ಪಾಟೀಲ್, ಬಿಎಸ್ ಪಾಟೀಲ್, ಎಸ್ ಬಿ ಬಿರಾದಾರ್, ಎಸ್ ಎಸ್ ಅವಟಿ, ಹರಿನಾಥ್ ಎನ್ ಹಾಗೂ ಅತಿಥಿ ಶಿಕ್ಷಕರಾದ ಪರಶುರಾಮ ಮೂಲಿಮನಿ, ಬಿ ಬಿ ಫಾತಿಮಾ ಸೇರಿದಂತೆ ಶಾಲೆಯ ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.

