ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಶಿವ ಚಿದಂಬರ ದೇವಾಲಯದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸರ್ವಸಾಧಾರಣ ಸಭೆಯಲ್ಲಿ ಈ ಎಲ್ಲ ಆಯ್ಕೆ ಪ್ರಕ್ರಿಯೆ ಹಾಗೂ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸಮಿತಿ ವತಿಯಿಂದ ಕೈಗೊಳ್ಳಬಹುದಾದ ಕಾರ್ಯಚಟುವಟಿಕೆಗಳ ಕುರಿತು ಕಾರ್ಯ ಯೋಜನೆ ರೂಪಿಸಲಾಯಿತು.
ನಿಕಟಪೂರ್ವ ಉಪಾಧ್ಯಕ್ಷ ಮಹಾದೇವ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ನೂತನ ಅಧ್ಯಕ್ಷರಾಗಿ ಲಕ್ಷ್ಮೀಕಾಂತ ಕುಲಕರ್ಣಿ, ಉಪಾಧ್ಯಕ್ಷರಾಗಿ ಅಂಬಾದಾಸ ಜೋಶಿ, ಕಾರ್ಯದರ್ಶಿಯಾಗಿ ವೆಂಕಟೇಶ ಜೋಶಿ ನಂದವಾಡಗಿ, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾಗಿ ಶಂಕರ್ ಭಟ್ ಅಗ್ನಿಹೋತ್ರಿ, ಚಿದಂಬರ ಪಾಟೀಲ, ವಿ.ಸಿ. ಕುಲಕರ್ಣಿ, ರಾಘವೇಂದ್ರ ಜೋಶಿ ಸಂಕನಾಳ, ವೆಂಕಟೇಶ ಜೋಶಿ ಹಡ್ಲಿಗೇರಿ, ಮುಕುಂದ ಹಂಗರಗಿ, ಸುಧೀಂದ್ರ ಕುಲಕರ್ಣಿ, ಚಿದಂಬರ ಜೋಶಿ, ವಿಜಯ ಜೋಶಿ, ಉಪೇಂದ್ರ ದೇಸಾಯಿ ಅವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ
ಪ್ರಾಣೇಶ ಕುಲಕರ್ಣಿ, ವಿಶ್ವನಾಥ ಕುಲಕರ್ಣಿ, ರಾಘವೇಂದ್ರ ಆಲಗೂರ, ಎ.ಡಿ. ದೇಶಪಾಂಡೆ, ಆರ್.ಬಿ. ಕುಲಕರ್ಣಿ, ಕೃಷ್ಣಾ ಜೋಶಿ, ರಾಮಚಂದ್ರ, ಮೊರೆ ಚಿದಂಬರ ಮಮದಾಪೂರ, ಯಲಗೂರೇಶ ದೇಶಪಾಂಡೆ, ಶ್ರೀಧರ ಕುಲಕರ್ಣಿ, ವಾಳ್ವೇಕರ, ವೆಂಕಟೇಶ ಕುಲಕರ್ಣಿ, ನಾಗರಾಜ ಜೋಶಿ, ಅರವಿಂದ ಜೋಶಿ, ದೀಪಕ ಜೋಶಿ, ಉಮೇಶ ಜೋಶಿ, ಉದಯ ಔರಸಂಗ, ಪದ್ಮನಾಭ ಜೋಶಿ, ಮಾಲತೇಶ ಕುಲಕರ್ಣಿ, ಪವನ ಕುಲಕರ್ಣಿ, ಪವನ ಜೋಶಿ ಹಾಗೂ ಸಮಸ್ತ ಸಮಾಜ ಮುಖಂಡರು ಉಪಸ್ಥಿತಿ ಇದ್ದರು.

