Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಭಗವದ್ಗೀತೆ ಸಂದೇಶ ಪ್ರತಿ ಮನೆಗೆ ತಲುಪಬೇಕಿದೆ :ಶಹಾಪೂರ
(ರಾಜ್ಯ ) ಜಿಲ್ಲೆ

ಭಗವದ್ಗೀತೆ ಸಂದೇಶ ಪ್ರತಿ ಮನೆಗೆ ತಲುಪಬೇಕಿದೆ :ಶಹಾಪೂರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುದ್ದೇಬಿಹಾಳದಲ್ಲಿ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಣ ವರ್ಗ

ಭಗವದ್ಗೀತೆ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ :ಮಣಿ

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಅಧರ್ಮದ ವಿರುದ್ಧವೇ ಧರ್ಮವಾಗಿದೆ ಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯ ಭಗವದ್ಗೀತಾ ಅಭಿಯಾನ ಪ್ರಶಿಕ್ಷಣ ಪ್ರಮುಖ ಅರುಣ ಶಹಾಪೂರ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಶಿರಸಿ, ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನಡೆಸುತ್ತಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಆಯೋಜಿಸಿರುವ ಪ್ರಶಿಕ್ಷಣ ವರ್ಗದಲ್ಲಿ ವರು ಮಾತನಾಡಿದರು.
ಭಾಷೆಯ ಸ್ಪಷ್ಟ ಉಚ್ಛಾರಣೆ ಮತ್ತು ಜ್ಞಾನದ ಅಭಿವೃದ್ಧಿಗೆ ಸಂಸ್ಕೃತ ಭಾಷೆಯ ಅಧ್ಯಯನದ ಅವಶ್ಯಕತೆ ಇದೆ. ಆತ್ಮತೃಪ್ತಿಗಾಗಿ ಧರ್ಮದ ಕಾರ್ಯವನ್ನು ಮಾಡಬೇಕಾಗಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಯ ಪಾಲನೆ, ಪೋಷಣೆ ಆಗಬಾರದಾಗಿದೆ. ಧರ್ಮವನ್ನು ಸರಿಯಾಗಿ ಅರ್ಥೈಸಿ ನಾವೆಲ್ಲ ನಡೆಯಬೇಕಾಗಿದೆ. ಧರ್ಮದ ಒಳ್ಳೆಯ ಅಂಶಗಳು ಮೈಮನಗಳಲ್ಲಿ ತುಂಬಿಕೊಳ್ಳಬೇಕಾಗಿದೆ. ಭಗವದ್ಗೀತೆಯ ಸಂದೇಶ ಪ್ರತಿಯೊಬ್ಬರ ಮನೆಮನೆಗಳಿಗೆ ತಲುಪಬೇಕಾಗಿದೆ ಎಂದರು.
ಪ್ರಶಿಕ್ಷಣ ವರ್ಗ ಉದ್ಘಾಟಿಸಿ ನಿವೃತ್ತ ಶಿಕ್ಷಕ ಅಶೋಕ ಮಣಿ ಮಾತನಾಡಿ ಭಾರತದ ಎಲ್ಲಾ ಧರ್ಮಗಳ ಮೂಲ ಅದು ಸನಾತನ ಧರ್ಮವಾಗಿದೆ. ಸನಾತನ ಧರ್ಮ ತಾಯಿಬೇರು ಅದಕ್ಕೆ ಕೊಡಲಿ ಪೆಟ್ಟು ಹಾಕುತ್ತಿದ್ದೇವೆ ಬೇರೆ ಧರ್ಮಗಳನ್ನು ಪ್ರೀತಿಸೋಣ. ಆದರೆ ನಮ್ಮ ಮೂಲ ಧರ್ಮ ಮರೆಯಬಾರದು ಎಂದರು.
ಭಗವದ್ಗೀತೆ ಅಭಿಯಾನ ಜಿಲ್ಲಾಪ್ರಮುಖ ಶ್ರೀರಾಮ ಭಟ್ಟ ಮಾತನಾಡಿ ಭಗವದ್ಗೀತೆ ಎಲ್ಲರಿಗಾಗಿ ಇದೆ. ಕೇವಲ ಒಂದೇ ವರ್ಗಕ್ಕಾಗಲಿ ಅಥವಾ ಧರ್ಮಕ್ಕಾಗಲಿ ಇದು ಸೀಮಿತವಾಗಿಲ್ಲ. ಎಲ್ಲರೂ ಓದಬಹುದಾದ ಪವಿತ್ರ ಗ್ರಂಥವಾಗಿದೆ. ಜಾತಿ ಬೇಧ ಭಾವ ಇಲ್ಲದ ಸರ್ವಸ್ಪರ್ಶಿ ಸರ್ವವ್ಯಾಪಿ ಭಗವದ್ಗೀತೆಯಾಗಿದೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಯು.ಬಿ.ಧರಿಕಾರ ಮಾತನಾಡಿದರು.
ಭಗವದ್ಗೀತೆ ಅಭಿಯಾನ ತಾಲೂಕು ಸಮಿತಿಯ ಅಧ್ಯಕ್ಷ ಶ್ರೀಶೈಲ್ ದೂಡಮನಿ, ಶಿಕ್ಷಕಿ ರಂಜಿತಾ ಹೆಗಡೆ ಹಾಗೂ ವಿದ್ಯಾರ್ಥಿಗಳು ಭಗವದ್ಗೀತೆ ೯ ನೇ ಅಧ್ಯಾಯ ಪಠಣ ಮಾಡಿದರು.
ಭಗವದ್ಗೀತೆ ಪ್ರಶಿಕ್ಷಣ ವರ್ಗದಲ್ಲಿ ಸಂಪನ್ಮೂಲ ವ್ಯಕ್ತಿ ಗುರು ಕುಲಕರ್ಣಿ, ಪ್ರಭು ಕಡಿ, ಸುಭಾಸ ಬಿದರಕುಂದಿ, ಎಸ್.ಎಲ್.ಗುರವ, ಪ್ರಭುಗೌಡ ಪಾಟೀಲ್, ಕಾಶಿಬಾಯಿ ರಾಂಪೂರ, ಪ್ರವೀನ ನಾಡಗೌಡ, ನಾಗೇಶ ಪಿ.ಎನ್ ,ಸಂಗಮ್ಮ ದೇವರಳ್ಳಿ, ಶ್ರೀಮಾಣಿಕ ಕುಲಕರ್ಣಿ, ಟಿ.ಡಿ.ಲಮಾಣಿ, ಪ್ರೀತಿ ದೇಗಿನಾಳ, ಗುಂಡು ಚವ್ಹಾಣ, ಎಸ್.ಆರ್.ಸುಲ್ಪಿ, ಬಸವರಾಜ ಸಜ್ಜನ, ಎಚ್.ಎನ್.ಇಟಗಿ, ಬಿ.ಎಸ್.ಪಾಟೀಲ್, ಕಿರಣ್ ಪಾಟೀಲ್, ಪ್ರವೀಣ ಹಲ್ಲೂರ, ಬಿ.ಎಸ್.ಹಿರೇಮಠ, ವೀರೇಶ ಢವಳಗಿ, ಎ.ಕೆ.ಪಡೇಕನೂರ, ರವಿ ಸುಧಾಕರ, ರಾಜು ಬಳ್ಳೊಳ್ಳಿ, ರಾಜಶೇಖರ ಮ್ಯಾಗೇರಿ, ಗಿರೀಶಗೌಡ ಪಾಟೀಲ್ ನಾಲತವಾಡ, ಶರಣಮ್ಮ ಗಂಗನಗೌಡರ, ಎಸ್.ಎಸ್.ಹಂಜಗಿ, ಸಂತೋಷ ಬಾದರಬಂಡಿ, ಅನೀಲ ತೇಲಂಗಿ, ರವೀಂದ್ರ ಬಿರಾದಾರ, ಬಿ.ಎಸ್.ಗುರವ್ಹ್, ಸಂಗಮೇಶ ಸಜ್ಜನ, ಅನ್ನಪೂರ್ಣ ನಾಗರಾಳ, ಸರಸ್ವತಿ ಮಡಿವಾಳರ, ಶ್ರೀಕಾಂತ ಹಿರೇಮಠ, ಇಂದು ನಾಯಕ, ಗುರುಬಾಯಿ ತಂಗಡಗಿ, ವರ್ಷಾ ಹುನಗುಂದ, ರೂಪಾ ನಾಟಿಕರ ಸೇರಿದಂತೆ ಮತ್ತೀತರರು ಇದ್ದರು.
ಸಂಚಾಲಕ ರಾಮಚಂದ್ರ ಹೆಗಡೆ ನಿರೂಪಿಸಿದರು. ಬಸಯ್ಯ ನಂದಿಕೇಶ್ವರಮಠ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.