ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹೊಟ್ಟೆ ನೋವು ತಾಳದೇ ವಿದ್ಯಾರ್ಥಿನಿಯೊಬ್ಬಳು ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ತಂಗಡಗಿಯ ನೀಲಮ್ಮ ದೇವಸ್ಥಾನದ ಬಳಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಬಾಲಮ್ಮ ಕಮರಿ(೧೮) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮ ದವಳಾಗಿದ್ದ ಬಾಲಮ್ಮ ಇಳಕಲ್‌ದಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈಕೆ ಸ೧೪ ರಂದು ಕಾಲೇಜಿಗೆ ಹೋಗಿ ಬರುವದಾಗಿ ಹೇಳಿ ಅಂದು ಮದ್ಯಾಹ್ನ ೧:೩೦ ರ ಸುಮಾರು ತಂಗಡಗಿಯ ನೀಲಮ್ಮ ದೇವಿ ದೇವಸ್ಥಾನದ ಬಳಿ ಬ್ಯಾಗ್ ಮತ್ತು ಚಪ್ಪಲಿ ಬಿಟ್ಟು ನದಿಗೆ ಹಾರಿದ್ದಾಳೆ ಎನ್ನಲಾಗಿದೆ. ಅಂದು ನದಿಗೆ ಹಾರಿದ ಬಾಲಮ್ಮಳ ಶವ ಸ೧೬ ರಂದು ತಾಲೂಕಿನ ಇಂಗಳಗಿಯಲ್ಲಿ ಪತ್ತೆಯಾಗಿದೆ.
ಪತ್ತೆಯಾದ ಶವವನ್ನು ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರಮೋದ ಸುಂಕದ್, ಚಂದ್ರಶೇಖರ ಮಾದರ, ಬಿ.ಬಿ.ನಾಟೆಕಾರ, ನಾಗೇಶ ರಾಠೋಡ, ರಾಜು ರಾಠೋಡ, ವೈ.ಎಸ್.ಗೌಡರ, ಜಾವೇದ, ಕಾರ್ತಿಕ ನಾಟೆಕಾರ, ವಿರುಪಾಕ್ಷಿ, ರಂಗನಗೌಡ, ನಿಂಗನಗೌಡ ಹೊರತೆಗೆದು ಪೊಲೀಸರಿಗೆ ಹಸ್ತಾಂತರಿಸಿದರು.
ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಮಾನಸಿಕ ಮಾಡಿಕೊಂಡು ಹೊಳೆಗೆ ಹಾರಿದ್ದು ಘಟನೆಯಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತಳ ತಂದೆ ನೀಡಿದ ದೂರಿದ ಆಧಾರದ ಮೇಲೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

