ವಿಜಯಪುರ: ಇತ್ತಿಚೆಗೆ ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಗೂ ಡೋಣಿ ನದಿಗಳ ಪ್ರವಾಹದಿಂದಾಗಿ ತೊಗರಿ, ಹತ್ತಿ, ಹೆಸರು, ಉದ್ದು, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತು ಹಾನಿ ಉಂಟಾಗಿ ರೈತರಿಗೆ ಸಾಕಷ್ಟು ಪ್ರಮಾಣದ ನಷ್ಟವನ್ನು ಉಂಟು ಮಾಡಿದೆ, ಈ ಕುರಿತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡಿ ಸರಕಾರದಿಂದ ಹಾಗೂ ವಿಮಾ ಕಂಪನಿಯಿಂದ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಟಿ.ಬೂಬಾಲನ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.
ಈ ವೇಲೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡಿ, ಕಳೆದ ೨-೩ ವರ್ಷದ ಬರಗಾಲದ ನಷ್ಟದಿಂದ ಆಚೆ ಬರದೇ ಸಾಲದ ಸುಳಿಯಲ್ಲಿ ಒದ್ದಾಡುತ್ತಿರುವ ರೈತ ಕುಲಕ್ಕೆ ಈ ವರ್ಷವಾದರೂ ಅನುಕೂಲವಾದೀತು ಎಂಬ ಆಶಾಭಾವನೆಯೊಂದಿಗೆ ಸಾಲಸೋಲ ಮಾಡಿ ಜಮೀನು ಹದ ಮಾಡಿ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೀಟ ನಾಶಕ ತಂದು ಬಿತ್ತನೆ ಮಾಡಿರುವ ರೈತರಿಗೆ ಈ ಮಳೆ ಸಾಕಷ್ಟು ನಷ್ಟ ಉಂಟು ಮಾಡಿದೆ, ಬಿತ್ತಿದ ಬೆಳೆ ಮಳೆಯ ರಭಸಕ್ಕೆ ನೆಲ ಕಚ್ಚಿವೆ, ಕೂಡಲೇ ಸರಕಾರದಿಂದ ಜಂಟಿ ಸಮೀಕ್ಷೆ ಮಾಡಿ ನೈಜವಾಗಿ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಒತ್ತಾಯಿಸುತ್ತೆವೆ ಎಂದರು.
ಜಿಲ್ಲೆಯ ಎಲ್ಲಾ ೧೩ ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ನಿರ್ದೇಶಿಸಬೇಕು, ಕೆಲವೊಂದು ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ಆದೇಶ ಬಂದಿಲ್ಲ ಎಂದು ರೈತರಿಗೆ ಮರಳಿ ಕಳುಹಿಸುತ್ತಿದ್ದಾರೆ, ವಿಮೆ ತುಂಬಿದ ಎಲ್ಲಾ ರೈತರಿಗೂ ಸರಿಯಾದ ನ್ಯಾಯ ಸಿಗಬೇಕು, ಈ ಕುರಿತು ರೈತರಿಗೆ ಪತ್ರಿಕಾ ಪ್ರಕಟಣೆ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಅವಶ್ಯವಿರುವ ದಾಖಲಾತಿಗಳನ್ನು ಇಲಾಖೆಗೆ ನೀಡುವಂತೆ ತಿಳಿಸಬೇಕು, ಕಳೆದ ವರ್ಷ ವಿಮೆಯಲ್ಲಿ ಭಾರಿ ಪ್ರಮಾಣದ ಮೊಸ ಆಗಿದೆ ಎಂದು ಹೋರಾಟ ಕೂಡಾ ಮಾಡಲಾಗಿದೆ, ಈ ವರ್ಷ ಈ ರೀತಿ ಆಗಬಾರದು ಎಂದರು.
ಈ ವೇಳೆ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ನಗರದ ಘಟಕದ ಅಧ್ಯಕ್ಷ ಸಂಗಪ್ಪ ಟಕ್ಕೆ, ಶಂಕರ ವಾಘೆ, ಹೊರಿಯರಾದ ಲಾಯಪ್ಪ ವಾಘೆ, ಸಚಿನ ಬಿರಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

