ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿರುವ ಗಜಾನನ ಮಹಾ ಮಂಡಳಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಗಂಗಾ ಆರತಿ ನಡೆಯಿತು.
ಆರತಿಯನ್ನು ವಾರಣಾಸಿಯಿಂದ ಆಗಮಿಸಿದ್ದ ಐದು ಜನ ಅರ್ಚಕರಿಂದ ಗಣೇಶನಿಗೆ ಒಂದು ಗಂಟೆ ಕಾಲ ಗಂಗಾ ಆರತಿ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ಶ್ರೀ ಅವಧೂತ ಸಿದ್ಧ ಮಹಾರಾಜರು ಅರಿಕೇರಿಗುಡ್ಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಸಾವಿರಾರು ಭಕ್ತರು ಉಪಸ್ಥಿತರಿದ್ದರು. ಗಂಗಾ ಆರತಿ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ. ಮಾಡಲಾಯಿತು. ಸುಮಾರು 1ಗಂಟೆ ಕಾಲ ಗಣೇಶನಿಗೆ ಗಂಗಾ ಆರತಿ ಮೂಲಕ ಪೂಜೆ ಸಲ್ಲಿಸಲಾಯಿತು.

