ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮದ ಶ್ರೀಮಲ್ಲಿಕಾರ್ಜುನ ಗಜಾನನ ಉತ್ಸವದ ಅಂಗವಾಗಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಬುಧವಾರ ಗಜಾನನ ಉತ್ಸವದ ಅಂಗವಾಗಿ ಮುತೈದೆಯರಿಗೆ ಉಡಿ ತುಂಬುವುದರ ಮೂಲಕ ನಾಡಿನ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಉಡಿ ತುಂಬಿಕೊಂಡ ಮುತೈದೆಯರು ನಾಡಿಗೆ ಮಳೆ, ಬೆಳೆ ಸಮೃದ್ಧಿಯಾಗಲಿ, ಮಕ್ಕಳೆಲ್ಲಾ ಸಂಸ್ಕಾರವಂತರಾಗಲಿ, ಪ್ರಾಣಿ, ಪಕ್ಷಿಗಳೆಲ್ಲಾ ಸಂತೋಷವಾಗಿ ಬದುಕಲಿ, ನಮ್ಮ ಪ್ರಕೃತಿ, ಪರಿಸರ ವಿಕೋಪಕ್ಕೆ ಒಳಗಾಗದೇ ಶಾಂತಿಮಯವಾಗಿರಲಿ, ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಲು ಆ ವಿಘ್ನನಿವಾರಕ ವಿನಾಯಕ ನಮ್ಮನ್ನೆಲ್ಲಾ ಆಶೀರ್ವದಿಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಮುತೈದೆಯರು ಸೇರಿದಂತೆ ಗ್ರಾಮಸ್ಥರಿಗೆ ಮಹಾಪ್ರಸಾದ ವಿತರಿಸಲಾಯಿತು.
ಅನೀತಾ ಪಾಟೀಲ, ರತ್ನಾಬಾಯಿ ಬಿರಾದಾರ, ಭಾಗೀರಥಿ ನಾಗರಳ್ಳಿ, ಜಯಶ್ರೀ ಬಿರಾದಾರ, ಮಹಾದೇವಿ ಬಿರಾದಾರ, ಸರುಬಾಯಿ ಹೊನ್ನುಟಗಿ, ಶಂಕ್ರಮ್ಮ ಬಸರಕೋಡ, ಭಾರತಿ ಗಬ್ಬೂರ, ಗಂಗೂಬಾಯಿ ಪೋಲೇಶಿ, ಸುಕನ್ಯಾ ಸರಬಡಗಿ, ಭೋರಮ್ಮ ರೋಡಗಿ, ಲಕ್ಷ್ಮೀ ಹದರಿ, ರಶ್ಮೀ ಬಿರಾದಾರ ಸೇರಿದಂತೆ ಗಜಾನನ ಉತ್ಸವ ಸಮಿತಿಯ ಸರ್ವಸದಸ್ಯರು ಇದ್ದರು.

