Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಂಡಿ ತಾಲೂಕಿಗೆ ಹೆಸ್ಕಾಂ, ಕೆಪಿಟಿಸಿಎಲ್ ಕೊಡುಗೆ ಅನನ್ಯ :ಶಾಸಕ ಯಶವಂತರಾಯಗೌಡ
(ರಾಜ್ಯ ) ಜಿಲ್ಲೆ

ಇಂಡಿ ತಾಲೂಕಿಗೆ ಹೆಸ್ಕಾಂ, ಕೆಪಿಟಿಸಿಎಲ್ ಕೊಡುಗೆ ಅನನ್ಯ :ಶಾಸಕ ಯಶವಂತರಾಯಗೌಡ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಾತಲಗಾಂವ ಕ್ರಾಸ್ ನಲ್ಲಿ ೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ

ಇಂಡಿ: ತಾಲೂಕಿನಲ್ಲಿ ಈಗಾಗಲೇ ೧೩ ವಿದ್ಯುತ್ ವಿತರಣಾ ಕೇಂದ್ರಗಳಿದ್ದು ಇನ್ನೂ ಎರಡು ಸಧ್ಯದಲ್ಲಿಯೇ ಪ್ರಾರಂಭವಾಗಲಿದ್ದು ಇನ್ನು ನಾಲ್ಕು ಮಂಜುರಾತಿ ಹಂತದಲ್ಲಿವೆ. ತಾಲೂಕಿಗೆ ವಿದ್ಯುತ್ ಇಲಾಖೆಯ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಅವರು ತಾಲೂಕಿನ ಸಾತಲಗಾಂವ ಕ್ರಾಸ್ ನಲ್ಲಿ ೧೧೦/ ೧೧ ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯವು ವಿದ್ಯುತ್ ವಿತರಣೆಯಲ್ಲಿ ಸ್ವಾವಲಂಬಿಯಾಗಿದ್ದು ಹೈಡ್ರೊ, ವಿಂಡ್, ಸೋಲಾರ, ಎನ್.ಟಿ.ಪಿಸಿ ಮತ್ತು ಕಾರ್ಖಾನೆಯ ಕೊಜೆನ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ದಿನದ ಏಳು ಗಂಟೆ ವಿದ್ಯುತ್ ಇಂಡಿ ತಾಲೂಕಿನಲ್ಲಿ ರೈತರಿಗೆ ನೀಡಲಾಗುತ್ತಿದೆ ಎಂದರು.
ಕೇಂದ್ರದ ಆಗಿನ ಇಂಧನ ಸಚಿವ ಸುಶೀಲಕುಮಾರ ಇವರ ಸಹಕಾರದಿಂದ ಎನ್‌ಟಿಪಿಸಿ ಕೂಡಗಿಯಲ್ಲಿ ಆಗಿದ್ದು ಆಲಮಟ್ಟಿ ಆಣೆಕಟ್ಟಿನ ಎತ್ತರ ೫೨೪ ಮೀ ಆದರೂ ನಾವು ರೈತರ ಹೊಲಗಳಿಗೆ ವಿದ್ಯುತ್ ಸಾಕಾಗುತ್ತದೆ ಎಂದರು.
ಈ ಹಿಂದೆ ದಕ್ಷಿಣ ಕರ್ನಾಟಕದಲ್ಲಿ ವಿದ್ಯುತ ತೊಂದರೆ ಇರಲಿಲ್ಲ. ನಾವು ನ್ಯಾಯಯುತವಾದ ಬೇಡಿಕೆ ಮಾಡಿದ್ದರಿಂದ ಸಿದ್ದರಾಮಯ್ಯನವರು ಸಹಕರಿಸಿದ್ದಾರೆ. ಇದರಿಂದ ಗ್ರಾಮೀಣ ಬದುಕು ಬದಲಾಗುತ್ತಿದೆ. ಅದಲ್ಲದೆ ತಾಲೂಕಿನಲ್ಲಿ ವಿದ್ಯುತ್ ಸೇರಿದಂತೆ ಎಲ್ಲ ೧೫೯ ಇಲಾಖೆಗಳಿಗೂ ಅನುದಾನ ತಂದು ಅಭಿವೃದ್ದಿ ಮಾಡುತ್ತಿದ್ದೇವೆ ಎಂದರು.
ಮುಖ್ಯ ಅಭಿಯಂತರ ಜಿ.ಕೆ.ಗೋಟ್ಯಾಳ ಮಾತನಾಡಿ, ಸಾತಲಗಾಂವ ಕ್ರಾಸ್ ನಲ್ಲಿ ಇಂದು ಪ್ರಾರಂಬಿಸಲಾಗಿರುವ ವಿದ್ಯುತ್ ವಿತರಣಾ ಕೇಂದ್ರ ೨೦ ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಸಾಲೋಟಗಿ, ನಾದ, ಸಾತಲಗಾಂವ ಮತ್ತು ಗೋಳಸಾರ ಗ್ರಾಮಗಳಿಗೆ ರೈತರ ಹೊಲಗಳಿಗೆ ವಿದ್ಯುತ್ ವಿತರಣೆ ಯಾಗುತ್ತಿದೆ ಎಂದರು.
ಇಂಡಿ ತಾಲೂಕಿನಲ್ಲಿ ಇರುವಷ್ಟು ವಿತರಣಾ ಕೇಂದ್ರ ರಾಜ್ಯದ ಯಾವದೇ ತಾಲೂಕಿನಲ್ಲಿ ಇಲ್ಲ. ಇನ್ನು ಹಡಲಸಂಗ, ಭೈರುಣಗಿ, ನಿಂಬಾಳ ಗ್ರಾಮಗಳಲ್ಲಿ ವಿತರಣಾ ಕೇಂದ್ರ ಸದಸ್ಯದಲ್ಲಿಯೇ ಪ್ರಾರಂಭಿಸಲಾಗುತ್ತದೆ ಎಂದರು.
ಗಂಗಾಧರ ಲೋಣಿ, ಬಸವರಾಜ ಗೊರನಾಳ, ದಾದಾಸ್ವಾಮಿ ಮಠ ಮಾತನಾಡಿದರು.
ವೇದಿಕೆಯ ಮೇಲೆ ಪರಮಪೂಜ್ಯ ಮದ್ದಾನಿ ಮಹಾರಾಜರು, ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಬಾಬು ರಾಠೋಡ, ವೃತ್ತ ಅಧಿಕ್ಷಕ ಅಭಿಯಂತರ ರಮೇಶ ಪವಾರ, ಹೆಸ್ಕಾಂ ಅಧಿಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ,ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಗ್ರಾ.ಪಂ ಸಾಲೋಟಗಿ ಅಧ್ಯಕ್ಷೆ ದಾನಮ್ಮ ಕುಂಬಾರ, ನಾದ ಗ್ರಾ.ಪಂ ಅಧ್ಯಕ್ಷ ಸಿದರಾಯ ಐರೋಡಗಿ, ಜಗದೀಶ ಜಾಧವ, ಎಸ್.ಎ.ಬಿರಾದಾರ, ಎಸ್.ಆರ್.ಮೆಂಡೆಗಾರ, ಆರ್.ವಿ.ಕುಂಬಾರ ಮತ್ತಿತರಿದ್ದರು.
ಭೂಮಿದಾನ ನೀಡಿದ ದಯಾನಂದ ಅವಟಿ, ಗುತ್ತಿಗೆದಾರ ಮಹಾದೇವ ಗಚ್ಚಿನಮಠ ಇವರನ್ನು ಸನ್ಮಾನಿಸಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.