ಬಸವನಬಾಗೇವಾಡಿ: ಪಟ್ಟಣದ ಕಾಳಹಸ್ತೇಶ್ವರಮಠದ ಹತ್ತಿರವಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಲಾಯಿತು.
ಬೆಳಗ್ಗೆ ವೀರಭದ್ರೇಶ್ವರ ಜಯಂತಿಯಂಗವಾಗಿ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ವೀರಭದ್ರೇಶ್ವರ ಜಯಂತ್ಯೋತ್ಸವದಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ತೆರಳಿ ಗಂಗಾಸ್ಥಳ ಮುಗಿಸಿಕೊಂಡು ಬಂದ ನಂತರ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸುವರ್ಣಾ ಕಾಳಹಸ್ತೇಶ್ವರಮಠ, ಜಯಶ್ರೀ ಕಾಳಹಸ್ತೇಶ್ವರಮಠ ಸಮ್ಮುಖದಲ್ಲಿ ವಿವಿಧ ಸುಮಂಗಲೆಯರು ವೀರಭದ್ರೇಶ್ವರ ದೇವರ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು. ತೊಟ್ಟಿಲೋತ್ಸವದಲ್ಲಿ ಅನುಸೂಯಾ ಹಡಪದ, ಲಕ್ಷ್ಮೀಬಾಯಿ ಹಡಪದ, ಸವಿತಾ ಮುಳವಾಡ, ಪ್ರೀತಿ ಜಾಡರ, ಸುಮಿತ್ರಾ ನಾಗೂರ, ಭಾರತಿ ಹಂಜಗಿ ಸೇರಿದಂತೆ ಓಣಿಯ ಎಲ್ಲ ತಾಯಂದಿರು ಭಾಗವಹಿಸಿದ್ದರು.
ನಂತರ ಜರುಗಿದ ಕಾರ್ಯಕ್ರಮವನ್ನು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪಂಚಾಕ್ಷರಿ ಕಾಳಹಸ್ತೇಶ್ವರಮಠ ಉದ್ಘಾಟಿಸಿದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಜನರಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಪದೇ ಪದೇ ಇಂತಹ ಕಾರ್ಯಕ್ರಮಗಳು ಜರುಗುತ್ತಿರಬೇಕು. ಇಂದಿನ ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ನೀಡುವ ಮೂಲಕ ಅವರಲ್ಲಿ ದೈವ ಭಕ್ತಿಯನ್ನು ಮೈಗೂಡಿಸಿದರೆ ಅವರ ಜೀವನವು ನೆಮ್ಮದಿಯಿಂದ ಕೂಡಿರುತ್ತದೆ. ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಮಾಡಿಕೊಳ್ಳುವದರಿಂದ ಯಾವಾಗಲೂ ಚೈತನ್ಯವಾಗಿ ಇರಲು ಸಾಧ್ಯ. ಲಿಂಗಪೂಜೆಯನ್ನು ನಿತ್ಯವೂ ತಪ್ಪದೇ ಮಾಡಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಶಿವಪ್ಪ ಬುರ್ಲಿ, ಪುರಸಭೆ ಸದಸ್ಯ ಅಶೋಕ ಸಂಪನ್ನವರ, ಮುಖಂಡ ಮತಾಬ ಬಮ್ಮನಳ್ಳಿ, ಪ್ರಲ್ಹಾದ ಹಡಪದ, ಬಸವರಾಜ ಹಂಜಗಿ ಇತರರು ಇದ್ದರು. ಶ್ರೀಶೈಲ ಶಿರಗುಪ್ಪಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಸುಭಾಸ ಹಡಪದ ನಿರೂಪಿಸಿ, ವಂದಿಸಿದರು. ಸದ್ಭಕ್ತರಿಗೆ
ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಸಂಜೆ ವೀರಭದ್ರೇಶ್ವರ ಜಯಂತೋತ್ಸವದಂಗವಾಗಿ 101 ದೀಪೋತ್ಸವ ಜರುಗಿತು.
Subscribe to Updates
Get the latest creative news from FooBar about art, design and business.
Related Posts
Add A Comment

