ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ದೇವರ ಜಾತ್ರಾಮಹೋತ್ಸವ, ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಬಸವಾದಿ ಪ್ರಮಥರ ವಚನ-ಚಿಂತನ ಪ್ರವಚನ ಮಂಗಲೋತ್ಸವದಂಗವಾಗಿ ಬುಧವಾರ ಸಂಜೆ ಜರುಗಿದ ಮೂಲನಂದೀಶ್ವರ(ಬಸವೇಶ್ವರ) ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ದೇವಸ್ಥಾನದ ಆವರಣದಲ್ಲಿ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯ ಕುಲಸಚಿವ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಮಹಾದೇವ ಮುರಗಿ ಚಾಲನೆ ನೀಡಿದರು.
ದೇವಸ್ಥಾನದದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವವು ಬಸವೇಶ್ವರ ವೃತ್ತ, ಅಗಸಿ ಮಾರ್ಗವಾಗಿ ಗ್ರಾಮದೇವತೆ ದೇವಸ್ಥಾನ, ಬಸವಜನ್ಮ ಸ್ಮಾರಕ ರಸ್ತೆ, ಅಶ್ವಥಾಂಜನೇಯ ದೇವಸ್ಥಾನ ರಸ್ತೆ, ಹಳ್ಳೆ ಪಲ್ಲೇಕಟ್ಟಿ, ಸಾರಂಗಮಠದ ಬಾವಿ ರಸ್ತೆ, ಕೊಡೆಕಲ್ಲ ಬಸವೇಶ್ವರ ದೇವಸ್ಥಾನದ ರಸ್ತೆ ಮಾರ್ಗವಾಗಿ ಪುನಃ ಅಗಸಿ, ಬಸವೇಶ್ವರ ವೃತ್ತ ಮಾರ್ಗವಾಗಿ ಬರುವ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಪಲ್ಲಕ್ಕಿಯಲ್ಲಿ ಉತ್ಸವ ನಂದಿ ಮೂರ್ತಿಯೊಂದಿಗೆ ವಚನ ಗ್ರಂಥಗಳ ಕಟ್ಟು ಮೆರವಣಿಗೆ ಮಾಡಲಾಯಿತು. ಪಲ್ಲಕ್ಕಿ ಉತ್ಸವ ಮಾರ್ಗದಲ್ಲಿ ಭಕ್ತರು ದೇವರಿಗೆ ಕಾಯಿ, ಸಕ್ಕರೆ, ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಭರತು ಅಗರವಾಲ,ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ರವಿ ರಾಠೋಡ, ಸಂಗಮೇಶ ಓಲೇಕಾರ, ಎಂ.ಜಿ.ಆದಿಗೊಂಡ, ಗುರಲಿಂಗ ಬಸರಕೋಡ, ಚಂದ್ರಶೇಖರ ಮುರಾಳ, ಬಸವಂತ ಅಡಗಿಮನಿ, ಗಿರೀಶ ಬಿರಾದಾರ, ಪುಟ್ಟು ಪಟ್ಟಣಶೆಟ್ಟಿ, ಎಂ.ಬಿ.ತೋಟದ, ಪ್ರವೀಣ ಪೂಜಾರಿ, ಸಿ.ಎಲ್.ಮುರಾಳ, ಎಸ್.ಎಸ್.ಝಳಕಿ, ಸಂಗಪ್ಪ ಡಂಬಳ, ಸುಭಾಸ ಹಡಪದ, ಮುರುಗೇಶ ನಾಯ್ಕೋಡಿ, ಬಸವರಾಜ ನಂದಿಹಾಳ, ಶ್ರೀಶೈಲ ಮಠಪತಿ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

