ಆಲಮಟ್ಟಿ: ಸಮೀಪದ ಬೇನಾಳ ಆರ್.ಎಸ್. ಗ್ರಾಮದ ವಾಕ್ ಸಿದ್ಧಿಪುರುಷ ರಾಮಣ್ಣ ಮುತ್ಯಾರವರ ೭೧ ನೇ ಪುಣ್ಯಸ್ಮರಣೆ ಆ.೨೬ ಸೋಮವಾರ ಜರುಗಲಿದೆ.
ಬೆಳಿಗ್ಗೆ ರಾಮಣ್ಣ ಮುತ್ಯಾರ ಗದ್ದುಗೆಗೆ ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ಜರುಗಲಿವೆ.
ಬೆಳಿಗ್ಗೆ ೧೧ ಗಂಟೆಯಿಂದ ಸಂಜೆಯವರೆಗೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವ ಸ್ಪರ್ಧೆ, ತೆಕ್ಕೆ ಬಡಿಯುವ ಸ್ಪರ್ಧೆ, ಕಲ್ಲು ವತಗಲ್ಲು ಮಾಡುವ ಸ್ಪರ್ಧೆ, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಜೋಳದ ಚೀಲ ಬೈಟೆಕ್ ಮಾಡುವ ಸ್ಪರ್ಧೆ ಸೇರಿದಂತೆ ನಾನಾ ಗ್ರಾಮೀಣ ಸ್ಪರ್ಧೆಗಳು ಜರುಗಲಿವೆ.
ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ, ನಾನಾ ಗಣ್ಯರು ಸ್ಮರಣೋತ್ಸವ ಸಂಭ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
