ಮುದ್ದೇಬಿಹಾಳ: ಪತ್ರಕರ್ತರಾದ ನಾವು ಯಾರ ಗುಲಾಮರಲ್ಲಾ. ನಮಗೆ ಭಯ ಭೀತಿ ಎಂಬುದು ಬೇಡ ಎಂದು ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಹೇಳಿದರು.
ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ತಾಳಿಕೋಟೆ ಮತ್ತು ಮುದ್ದೇಬಿಹಾಳ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ನೂತನ ದಿನಪತ್ರಿಕೆಯ ಲೋಕಾರ್ಪಣೆ ಹಾಗೂ ಸಾಧಕ ಪತ್ರಕರ್ತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲರಂತೆ ನಮಗೂ ಸಾವು ಎಂಬುದು ಇದ್ದೇ ಇದೆ. ಒಳ್ಳೆಯ ಕೆಲಸ ಒಳ್ಳೆಯ ಬರವಣಿಗೆಯನ್ನು ಮಾಡಿ ಸಾಯುವಂತಹ ಕೆಲಸ ಮಾಡೋಣ. ಯಾರ ಮುಲಾಜಿಗೂ ಒಳಗಾಗುವದು ಬೇಡಾ ಎಂದರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಪತ್ರಿಕೋಧ್ಯಮ ಮತ್ತು ಸಮೂಹ ಸಂಹನ ವಿಭಾಗದ ಪ್ರಾಧ್ಯಾಪಕ ಅರುಣ ಹೊಸಮಠ ಮಾತನಾಡಿ, ಜನರನ್ನು ಒಗ್ಗೂಡಿಸುವದು ಜಾಗೃತಿ ಮೂಡಿಸುವಂತಹ ಕಾರ್ಯ ಮಾಧ್ಯಮಗಳು ಮಾಡುತ್ತವೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ನಾಯಕ ಎಂಬ ತಮ್ಮದೇ ಆದ ಪತ್ರಿಕೆಯನ್ನು ಹೊರಡಿಸಿ ಬ್ರಿಟಿಷರ ವಿರುದ್ಧ ಹೋರಾಡಲು ತಮ್ಮ ಪತ್ರಿಕಾ ಬಳಗದಿಂದ ಸೇವಾ ಕಾರ್ಯಕ್ಕೆ ಮುಂದಾಗಿದ್ದರು. ಸಮಾಜದ ಕಣ್ಣು ತೆರೆಸುವ ಕಾರ್ಯ ಪತ್ರಿಕೆಗಳು ಅಂದು ಮಾಡಿದಂತೆ ಇಂದು ಮಾಡಬೇಕಾಗಿದೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಹಿರಿಯ ಪತ್ರಕರ್ತ ಕೆ.ಎಂ.ರಿಸಾಲದಾರ ಮಾತನಾಡಿ, ಇಂದಿನ ದಿನಮಾನದಲ್ಲಿಯ ಪತ್ರಿಕೋಧ್ಯಮದ ರೂಪ ಬೇರೆ ತಾಳಿದಂತಾಗಿದೆ ಎಂದರು.
ಹಿರಿಯ ಸಾಹಿತಿ ಅಶೋಕ ಮಣಿ, ಅಯೂಬ ಮಣಿಯಾರ, ವಿಜಯಕುಮಾರ ಉತ್ನಾಳ, ಈಶ್ವರ ಪೂಜಾರಿ, ಮೇಘನಾಥ ಸೊರಗೊಂಡ, ಭಾಜಪ ಧುರೀಣೆ ಕಾಶಿಬಾಯಿ ರಾಂಪೂರ, ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷ ಹಣಮಂತ ಬೆಳಗಲ್ಲ, ಹಣಮಂತ ಬೈರವಾಡಗಿ, ಮೊದಲಾದವರು ಉಪಸ್ಥಿತರಿದ್ದರು.
ತಾಳಿಕೋಟೆ, ನಾಲತವಾಡ, ಕಲಕೇರಿ, ಢವಳಗಿ, ಬಸರಕೋಡ, ತಂಗಡಗಿ ಭಾಗದ ಪತ್ರಿಕಾ ಬಳಗದವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಶೈಲ ಹೂಗಾರ ಸ್ವಾಗತಿಸಿದರು. ಟಿ.ಡಿ.ಲಮಾಣೆ ನಿರೂಪಿಸಿದರು. ಎಸ್.ಕೆ.ಘಾಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

