-ಸುಮನ್ ಪಾಟೀಲ್,ಕೆಸಿಪಿ ಕಾಲೇಜ್ ಜರ್ನಲಿಸಂ ವಿದ್ಯಾರ್ಥಿನಿ, ವಿಜಯಪುರ
ಕೇಸರಿ ಬಿಳಿ ಹಸಿರು ಬಾವುಟ , ಹೂವುಗಳು ಬಲೂನ್ಗಳು, ಸಾಲ ಕಾಲೇಜು ಬ್ಯಾಂಕ್ ಕಚೇರಿಗಳ ಮುಂದೆ ನಮ್ಮ ಭಾರತದ ರಾಷ್ಟ್ರೀಯ ಬಾವುಟದ ಬಣ್ಣಗಳ ರಂಗೋಲಿ, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಹೇಳುವ ಮಕ್ಕಳ ಭಾಷಣಗಳು , ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಎಂಬ ದೇಶಭಕ್ತಿ ಗೀತೆ, ದೇಶಭಕ್ತಿ ಗೀತೆಗಳ ಮೇಲೆ ನೃತ್ಯಗಳು, ಪಿರಮಿಡ್ ಗಳು ಹಲವಾರು ಕಾರ್ಯ ಕ್ರಮಗಳು ಈ ದಿನ ಅಗಸ್ಟ್ 15 ಅಂದರೆ ನಮ್ಮ ಭಾರತ ಸ್ವಾತಂತ್ರ್ಯ ದಿನವನ್ನು ಇನ್ನಷ್ಟು ಮೆರಗುಗೊಳಿಸುತ್ತವೆ.
ಇಂದಿಗೆ ಅಂದರೆ 78 ವರ್ಷಗಳ ಹಿಂದೆ ನಮ್ಮ ಭಾರತ ಬ್ರಿಟಿಷ್ ಸಾಮ್ರಾಜ್ಯ ಅಡಿಯಲ್ಲಿ ವರ್ಷಗಳ ಗುಲಾಮಗಿರಿ ಬಂಧನದ ನಂತರ, 1947 ಅಗಸ್ಟ್ 15 ರಂದು ಸ್ವಾತಂತ್ರ ಪಡೆಯಿತು. ಇದು ಸುಲಭದ ಕೆಲಸವಾಗಿರಲಿಲ್ಲ. ಮಹಾತ್ಮ ಗಾಂಧೀಜಿ ಜವಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲಾ ಲಜಪತ ರಾಯ್, ರಾಣಿ ಲಕ್ಷ್ಮೀಬಾಯಿ, ಬಾಲ್ ಗಂಗಾಧರ್ ತಿಲಕ್ ಇನ್ನು ಹಲವಾರು ಮಹಾನ್ ದೇಶ ಪ್ರೇಮಿಗಲು ದೇಶವನ್ನು ಪ್ರೀತಿಸುತ್ತಿದ್ದರು. ಮತ್ತು ಜನರ ಬಗ್ಗೆ ಕಾಳಜಿ ವಹಿಸಿದರು. ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಮತ್ತು ದೃಢ ನಿರ್ಧಾರದ ವರ್ಷಗಳ ಅಹಿಂಸಾತ್ಮಕ ಪ್ರಯತ್ನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲ ಜನರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಈ ದಿನ ಆಚರಿಸಲಾಗುತ್ತದೆ. ಸ್ವಾತಂತ್ರ ಪಡೆದ ನಂತರ ನಮ್ಮ ದೇಶವು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದ ಶಿಕ್ಷಣ ಸುಧಾರಣೆಗಳವರೆಗೂ ಭಾರತ ಬಹಳ ಅಭಿವೃದ್ಧಿಯತ್ತ ಸಾಗಿದೆ . ಆದರೂ ನಾವು ಇನ್ನೂ ಬಡತನ ಅನಕ್ಷರತೆ ಅಸಮ ಅಸಮಾನತೆ ಜಾತಿಭೇದ ಇತರ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಕರ್ತವ್ಯ ಈ ಸವಾಲುಗಳನ್ನು ಜಯಿಸಲು ಮತ್ತು ಉತ್ತಮ ಬಲಿಷ್ಠ ಭಾರತದ ನಿರ್ಮಿಸಲು ಕೆಲಸ ಮಾಡುವುದು ನಮ್ಮ ಆದ್ಯ ಕರ್ತವ್ಯ.
ನಮ್ಮ ಭಾರತ ವೈವಿಧ್ಯಮಯ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಇಲ್ಲಿ ಹಲವಾರು ಧರ್ಮಗಳು ಸಂಸ್ಕೃತಿಗಳು, ಭಾಷೆಗಳು, ಜನಾಂಗ ಗಳನ್ನು ರಾಷ್ಟ್ರೀಯತೆಯನ್ನು ಹೊಂದಿದ ವಿಭಿನ್ನ ಭೂಪ್ರದೇಶ. ಇದಲ್ಲದರ ಅರಿವಿದೆ ನಮ್ಮ ಸ್ವಾತಂತ್ರ್ಯ ನೇತಾರರಾದ ಮಹಾತ್ಮ ಗಾಂಧೀಜಿ ಜವಹರಲಾಲ್ ನೆಹರು ಭಗತ್ ಸಿಂಗ್ ಮೊದಲಾದ ಮಹಾನ್ ವೀರರು ಸ್ವಾತಂತ್ರ್ಯ ಚಳುವಳಿಯನ್ನು ರೂಪಿಸಿ ಅವರೆಲ್ಲರ ತ್ಯಾಗ ಬಲಿದಾನಗಳಿಂದ ದೊರೆತ ಈ ಸ್ವಾತಂತ್ರ್ಯವನ್ನು ನಮ್ಮ ದೇಶ “ಸಾರ್ವಭೌಮ ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಎಂದು ಭಾರತದ ಪ್ರಜೆಗಳಾದ ನಾವು ಹೆಮ್ಮೆಯಿಂದ ಕರೆದುಕೊಳ್ಳುತ್ತೇವೆ. ಭಾರತದ ಸ್ವಾತಂತ್ರ್ಯ ಇತಿಹಾಸವು ಒಂದು ಶತಮಾನಕ್ಕೂ ಹೆಚ್ಚು ಕಾಲ ನಡೆದ ಸುಧೀರ್ಘ ಪ್ರಯಾಣವಾಗಿದೆ ಈ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೆ ಅನೇಕರ ಬಲಿದಾನದೊಂದಿಗೆ ಸ್ವಾತಂತ್ರ್ಯ ಬಂದಿದೆ ಆದರೆ ಅವರು ಎಂದಿಗೂ ನಾವು ಈ ಜಾತಿಯವರು ನಾವೇ ಸ್ವಾತಂತ್ರ್ಯಕ್ಕಾಗಿ ನಿಮ್ಮೊಡನೆ ಬರಬೇಕು ನಮಗೆ ನಮ್ಮ ಜಾತಿಯೇ ಶ್ರೇಷ್ಠ ಎಂದು ಯೋಚಿಸದೆ ಎಲ್ಲರೂ ಎಲ್ಲ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸ್ವಾತಂತ್ರ್ಯ ಕ್ಕೆ ಪಣತೊಟ್ಟರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಎಲ್ಲ ಸಮುದಾಯಗಳನ್ನು ಸೇರಿಸಿ ಒಂದು ಮಾಡುವ ಮತ್ತು ಅವುಗಳ ಅವುಗಳ ವೈವಿಧ್ಯವನ್ನು ಗೌರವಿಸುವ ಸಂವಿಧಾನವನ್ನು ದೇಶಕ್ಕೆ ನೀಡಿದರು. ಆದರೆ ಇದು ಕೆಲವರಿಗೆ ಇಷ್ಟವಾಗಲಿಲ್ಲ. ಇಂದು ಸಮಾಜದಲ್ಲಿ ಏನಾಗುತ್ತಿದೆ ಕೋಮು ಧ್ರುವಿಕರಣ, ಜಾತಿ ಸಮುದಾಯಗಳ ನಡುವೆ ಜಗಳ ಹೆಚ್ಚಿಸುವ ಕೆಲಸ , ಅದಕ್ಕೆ ಸರಿಹೊಂದುವಂತೆ ಬಂದ ಕೇರಳ ಸಿನಿಮಾ ಸ್ಟೋರಿ . ಇದು ಮುಸ್ಲಿಂ ಹಿಂದುಗಳ ನಡುವೆ ಕಲಹದ ಕಿಡಿ ಹೊತ್ತಿಸುವ ವಿಭಜನಕಾರಿ ಚಟುವಟಿಕೆ ಈ ಸಿನಿಮಾ ಈ ಸಿನಿಮಾದ ನಿರ್ದೇಶಕರೇ ಸ್ವತಃ ಈ ಸಿನಿಮಾ ಕೇಸ್ ಆದಾಗ ಇದೊಂದು ಕಾಲ್ಪನಿಕ ಕಥೆ ಇದು ಎಲ್ಲೋ ಒಂದು ಕಡೆ ಆದ ಘಟನೆ ಇಂದು ಕ್ಷಮೆ ಕೋರಿದ್ದಾರೆ. ಆದರೂ ಈ ರೀತಿಯ ಚಟುವಟಿಕೆ ನಡೆಯುತ್ತಲೇ ಇವೆ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ಸುಳ್ಳು ಸುದ್ದಿಗಳು ಕೇವಲ ತಮ್ಮ ಧರ್ಮವೇ ಶ್ರೇಷ್ಠ ಎಂದು ಸಾರುವ ರೀತಿಯಲ್ಲಿ ಹಂಚಿಕೊಂಡು ಯುವಜನತೆಯ ಮನಸ್ಸಿನಲ್ಲಿ ದ್ವೇಷ ಬಿತ್ತುವ ಪರಿ ಇಂಥ ಗಂಭೀರ ಸನ್ನಿವೇಶದಲ್ಲೂ ವಿರೋಧ ಪಕ್ಷಗಳನ್ನು ಶತ್ರುಗಳಂತೆ ಕಾಣುವ ಭಿನ್ನಾಭಿಪ್ರಾಯಗಳನ್ನು ಲೇವಡಿ ಮಾಡುವ ರಾಜಕೀನಾಯಕರ ವರ್ತನೆ ಸದಭಿರುಚಿಯಿಂದ ಕೂಡಿಲ್ಲ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಭಾರತದ ಸ್ವಾತಂತ್ರ್ಯ ಅಪಾಯದಲ್ಲಿ ಇರುವುದು ಸ್ಪಷ್ಟವಾಗುತ್ತದೆ.
ಭಾರತದ ಪ್ರಗತಿ ನಮ್ಮ ಹೆಮ್ಮೆ ಸಂತೋಷ ಮತ್ತು ಪ್ರೀತಿಯನ್ನು ಹಂಚೋಣ ಬಲಿಷ್ಠ ಅಖಂಡ ಭಾರತವನ್ನು ಕಟ್ಟೋಣ ಗಾಂಧಿ ಅಂಬೇಡ್ಕರ್ ಭಗತ್ ಸಿಂಗ್ ಸುಭಾಷ್ ಚಂದ್ರ ಬೋಸ್ ಮೌಲಾನ ಆಜಾದರ ಪರಿಕಲ್ಪನೆಯ ಸ್ವಾತಂತ್ರ್ಯ ಜಾತ್ಯತೀತ ಭಾರತ ರಕ್ಷಿಸಲು ನಾವೆಲ್ಲ ಶ್ರಮಿಸೋಣ ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿ. ಭಾರತದ ಚೈತನ್ಯವನ್ನು ಸಂಭ್ರಮಿಸೋಣ. ಸ್ವಾತಂತ್ರವನ್ನು ಆಚರಿಸಿ ಪ್ರಜಾಪ್ರಭುತ್ವವನ್ನು ಗೌರವಿಸೋಣ.
ಜೈ ಹಿಂದ್
– ಸುಮನ್ ಪಾಟೀಲ್,
ಕೆಸಿಪಿ ಕಾಲೇಜ್ ಜರ್ನಲಿಸಂ ವಿದ್ಯಾರ್ಥಿನಿ, ವಿಜಯಪುರ