ವಿಜಯಪುರ: ನಗರದ ಅಲ್ಲಾಪುರ ಓಣಿಯ ಬಸವ- ಮಲ್ಲಿಕಾರ್ಜುನ ದೇವಸ್ತಾನದ ಮಲ್ಲಯ್ಯನ ಕಂಬಿ ಐದೇಶಿ ಅತ್ಯಂತ ಅದ್ದೂರಿಯಾಗಿ ಜರುಗಿತು.
ತಿಂಗಳ ಕಾಲ ಪಾದಯಾತ್ರೆ ಮೂಲಕ ಕಂಬಿ ಹೊತ್ತುಕೊಂಡು ಶ್ರೀಶೈಲಕ್ಕೆ ತೆರಳಿದ್ದ ಸ್ವಾಮೀಜಿಗಳು ಮತ್ತು ಯಾತ್ರಾರ್ಥಿಗಳನ್ನು ಕಳೆದ ಐದು ದಿನಗಳ ಹಿಂದೆ ವಿಜೃಂಭಣೆಯಿAದ ಬರಮಾಡಿಕೊಂಡು ಪ್ರತಿ ದಿನ ಸಾಯಂಕಾಲ ಪೂಜೆ ಪುನಸ್ಕಾರ ಮದಾಲಸಿ ಪ್ರಸಾದವಿತರಣೆ ಮಾಡಲಾಗುತಿತ್ತು. ಪ್ರತಿ ಭಕ್ತರ ಮನೆಯಲ್ಲಿ ಬ್ರಮರಾಂಬ ಸಹಿತ ಮಲ್ಲಿಕಾರ್ಜುನನ ಪೂಜಿಸಿ. ಸ್ವಾಮೀಜಿ ಅವರಿಗೆ ಮುತ್ತೈದೆಯರಿಗೆ ಪೂಜೆ ಬಾಗಿನ ಅರ್ಪಣೆ ಮಾಡಲಾಯಿತು.
ಅಲ್ಲಾಪೂರ ಓಣಿಯ ಬಸವ- ಮಲ್ಲಿಕಾರ್ಜುನ ದೇವಸ್ತಾನದ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ. ಸಿದ್ರಾಮಯ್ಯ ರೂಗಿಮಠ. ಕಲ್ಲಯ್ಯ ಸ್ವಾಮೀಜಿ. ರಾಜಶೇಖರ ಮಠ. ನಂದಯ್ಯಾ ಯಾದವಾಡಮಠ, ಶರಣು ಜೋಗುರ. ಪ್ರಭು ಸೊಲ್ಲಾಪುರ. ಸಿದ್ದಪ್ಪ ಅಂಗಡಿ ಮಲ್ಲಪ್ಪ ತೋನಸ್ಯಾಳ. ಈರನಗೌಡ ಪಾಟೀಲ್. ಭೀಮು ಲೋಗಾವಿ. ಚಂದ್ರಶೇಖರ್ ಹುಂಡೆಕಾರ.ಗೊಲ ನಗೌಡ ಬಿರಾದಾರ. ಡಾ.ಆರ್.ಜಿ.ಕಳ್ಳಿ. ನ್ಯಾಯವಾದಿ ದಾನೇಶ ಅವಟಿ ಸೇರಿದಂತೆ ಅನೇಕರಿದ್ದರು.
Related Posts
Add A Comment