ವಿಜಯಪುರ: ನಗರದ ವೀಣಾ ಕೋತವಾಲ ಅವರು ಬೆಂಗಳೂರಿನಲ್ಲಿ ಏರ್ಪಡಿಸಿದ ಜಗನ್ನಾಥ ದಾಸ ವಿರಚಿತ ಹರಿ ಕಥಾಮೃತಸಾರ ಕೃತಿಯನ್ನು ಸಂಪೂರ್ಣ ಬಾಯಿಪಾಠ ಒಪ್ಪಿಸಿದ್ದಕ್ಕಾಗಿ ಅವರಿಗೆ ದಾಸಪ್ರಿಯ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಶ್ರೀ ವ್ಯಾಸಮಧ್ವ ಸಂಶೋಧನ ಪ್ರತಿಷ್ಠಾನದವರು ಏರ್ಪಡಿಸಿದ ಹರಿಕಥಾಮೃತಸಾರ ಕಂಠಪಾಠ ಹಾಗೂ ಎಲ್ಲ ಸಂಧಿಗಳ ತಾರತಮ್ಯ ಹಾಗೂ ಪ್ರಶ್ನೋತ್ತರಗಳಿಗೆ ಉತ್ತರಿಸಿ ದಾಸಪ್ರಿಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶ್ರೀ ಉತ್ತರಾಧಿಮಠದ ಮಠಾಧೀಶ ಸತ್ಯಾತ್ಮತೀರ್ಥರಿಂದ ಪ್ರಶಸ್ತಿ ಪ್ರಧಾನ ಹಾಗೂ ಬಹುಮಾನವನ್ನು ವೀಣಾ ಕೋತವಾಲ ಪಡೆದುಕೊಂಡಿದ್ದಾರೆ.
Related Posts
Add A Comment