ವಿಜಯಪುರ: ನಗರದಲ್ಲಿ ಎನ್‌ಎಚ್‌ಎಆಯ್ ಇವರಿಂದ ನಡೆಯುತ್ತಿರುವ ಸರ್ವಿಸ್ ರೋಡನಿಂದ ಸಾರ್ವಜನಕರಿಗಾಗುವ ತೊಂದರೆ ಬಗೆಹರಿಸಲು ಆಗ್ರಹಿಸಿ ಹಂಚಿನಾಳ ಹೌಸಿಂಗ್ ಬೋರ್ಡ, ಉದಯ ನಗರ, ಹಾಗೂ ಉಮರಾಣಿ ಕಾಲೋನಿ, ಪಾರೇಖ ನಗರ, ಹಂಚಿನಾಳ ತಾಂಡೆ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸದರಿ ಬಡಾವಣೆಗಳ ಜನರಿಗೆ ಸಂಬAಧಪಟ್ಟAತೆ ಎನ್‌ಎಚ್‌ಎಆಯ್ ಇವರು ಸರ್ವಿಸ್ ರೋಡ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಆದರೆ ಆಶ್ರಮಕ್ಕೆ ಮಾರುಕಟ್ಟೆ, ಶಾಲೆಗೆ ಹೋಗಲು ಝಿಬ್ರಾ ಕ್ರಾಸ್ ಮಾಡಿ ಹೋಗಲು ಅನುಕೂಲ ಮಾಡಿಕೊಡಬೇಕು. ಹಾಗೂ ಈ ಸರ್ವಿಸ್ ರೋಡ ನಿರ್ಮಾಣದಿಂದ ಶಾಲೆಗೆ, ಆಸ್ಪತ್ರೆಗೆ ಸುತ್ತು ಹಾಕಿ ಹೋಗುವುದರಿಂದ ಸಮಯ ಹಾಗೂ ತೀವ್ರ ತರಹದ ತೊಂದರೆಯಾಗುತ್ತದೆ. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಎನ್‌ಎಚ್‌ಎಆಯ್ ಇವರಿಗೆ ದಿ.೦೬-೦೨-೨೦೨೨ ರಂದು ಮನವಿ ಸಹ ಸಲ್ಲಿಸಲಾಗಿತ್ತು. ಹಾಗೂ ಸಂಸದರಿಗೂ ಸಹ ಮನವಿ ಸಲ್ಲಿಸಲಾಗಿತ್ತು. ಸಂಸದರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಈವರೆಗೂ ಭರವಸೆಯಾಗಿಯೇ ಉಳಿದಿದೆ.
ಕಾರಣ ಈ ಸಮಸ್ಯೆಯನ್ನು ಈ ಚುನಾವಣೆಯೊಳಗೆ ಬಗೆಹರಿಸಬೇಕು. ಇಲ್ಲದೇ ಹೋದಲ್ಲಿ ಈ ಚುನಾವಣೆಯನ್ನು ಎಲ್ಲ ಬಡಾವಣೆಯ ಸಾರ್ವಜನಿಕರು ಬಹಿಷ್ಕರಿಸಲಾಗುವುದೆಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಪ್ರಕಾಶ ಎಸ್. ಕಡೇಚೂರ, ಎಸ್.ಎಸ್. ಬ್ಯಾಳಿ, ಎಸ್.ಆರ್. ಮಠಪತಿ, ಸುಭಾಷ ಅಸ್ಕಿ, ಎಸ್.ಎಂ. ಗಿಡ್ಡಪ್ಪಗೋಳ, ಆರ್.ಎಸ್. ಚಿಂಚೋಳಿ, ಗಣಿ ಫರ್ನಿಚರ‍್ಸ್, ಆರ್.ಎಸ್. ಅಂಜುಟಗಿ, ಆರ್.ಆರ್. ಮಾಡಗಿ, ರಾಮಣ್ಣ ಹಡಗಲಿ, ಸಂಜು ಶೇಗುಣಸಿ, ಎಂ.ಎಸ್. ಸಾವಳಗಿ, ಎನ್.ಎಸ್.ಪಾಟೀಲ, ಮೃತ್ಯುಂಜಯ್ಯ ಎಸ್. ಹಿರೇಮಠ, ಜಿ.ಎಸ್. ಬಡಿಗೇರ, ಎಂ.ಎಸ್. ಪೀರಗೌಡರ, ಸಂಗೋಷ ದುದ್ದಗಿ, ಮಾದೇವ ಚವ್ಹಾಣ ಇದ್ದರು.
ಸರ್ವಿಸ ರೋಡ ತೊಂದರೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
Related Posts
Add A Comment