ಬ್ರಹ್ಮದೇವನಮಡು: ಶ್ರೀ ಕಲ್ಶಾಣದೇಶ್ವರ ಮಠ ಐತಿಹಾಸಿಕ ಹಿನ್ನೆಲೆಯುಳ್ಳ ಧಾಮಿ೯ಕ ಕೇಂದ್ರವಾಗಿದ್ದು,ಭಕ್ತರ ಏಳ್ಗೆಗಾಗಿ ಸದಾ ಶ್ರಮಿಸಲಾಗುತ್ತಿದೆ.ಜಾತ್ರೆಗಳ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ನೆಮ್ಮದಿ ನೆಲೆಗೊಳ್ಳುತ್ತದೆ ಎಂದು ಸಿಂದಗಿ ಕಾಂಗ್ರೆಸ್ ಪಕ್ಷದ ಅಭ್ಶಥಿ೯ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಸಿದ್ಧಿಪುರುಷ ಸದ್ಗುರು ಶ್ರೀ ವಿಶ್ವರಾಧ್ಶ ತೊಟ್ಟಿಲೋತ್ಸವ ಕಾಯ೯ಕ್ರಮದ ಅಧ್ಶಕ್ಷತೆ ವಹಿಸಿ ಮಾತನಾಡಿ,ಒಳ್ಳೆಯ ವಿಚಾರಗಳನ್ನು ಕೇಳುತ್ತಿರಬೇಕು.ಪುರಾಣ,ಪುಣ್ಶ ಕಥೆ,ಶಾಸ್ತ್ರ,ಉತ್ತಮ ಪಾರಾಯಣ ಕೇಳಬೇಕು.ಕೇಳಿದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರ ಒಳಿತು ಬಯಸುವುದೇ ಮಾನವ ಧಮ೯. ಸತ್ಕಾಯ೯ಗಳೆಂದರೆ ದೇವರಿಗೆ ಪ್ರೀತಿ. ಪುರಾಣಗಳು ಈ ನೆಲದ ಸತ್ವ.ಸಂಪ್ರದಾಯವನ್ನು ಹತ್ತಿಕ್ಕಿ ನೆಮ್ಮದಿಯಿಂದ ಜೀವಿಸಲು ಸಾಧ್ಶವಿಲ್ಲ ಎಂದರು.
ಬೋರಗಿ – ಪುರದಾಳ ವಿಶ್ವರಾಧ್ಶ ಮಠದ ತಪೋರತ್ನಂ ಮಹಾಲಿಂಗೇಶ್ವರ ಸ್ವಾಮೀಜಿ, ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಶವಹಿಸಿ ಮಾತನಾಡಿ, ಜಾತ್ರೆ ಹಾಗೂ ಉತ್ಸವಗಳು ಜನರಲ್ಲಿ ಸಾಮರಸ್ಶ ಬೆಳೆಸುತ್ತವೆ. ಪ್ರತಿಯೊಬ್ಬರು ಧಾಮಿ೯ಕ ಕಾಯ೯ಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಶ್ರೀಮಠದ ಕಲ್ಶಾಣದಯ್ಶ ಸ್ವಾಮೀಜಿ, ಚಂದ್ರಶೇಖರ ಪುರಾಣಿಕ, ದಯಾನಂದ ಹಿರೇಮಠ, ಶ್ರೀಶೈಲ್ ಚಿಕ್ಕಮಠ, ನೂರಅಲಿ ಟೇಲರ್, ಕೆಂಭಾವಿಯ ಮಹಿಪಾಲ್ ರೆಡ್ಡಿ ಡಿಗ್ಗಾಂವಿ, ಹಳ್ಳೆಪ್ಪ ನಾಟೀಕಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರವಚನಕಾರ ಬ್ಶಾಡಗಿಹಾಳದ ಸಿದ್ದರಾಮ ಸ್ವಾಮೀಜಿ ಪ್ರವಚನ ನೀಡಿದರು. ದಾಸೋಹ ಸೇವೆಗೈದ ಗೋಲಗೇರಿ ಕೆಬಿಜೆಎನ್ಎಲ್ ಎಇಇ ರಾಜಪ್ಪ ಮುಗ್ಗಿದರಾಗಿಹಳ್ಳಿ ದಂಪತಿಗಳಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment