ಸಿಂದಗಿ: ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯನ್ನು ಉಭಯ ಪಕ್ಷಗಳು ನಕಲು ಮಾಡುತ್ತಿವೆ. ಪ್ರಚಾರಕ್ಕೆ ಬಳಕೆ ಮಾಡುತ್ತಿರುವ ಆಶ್ವಾಸನೆಗಳನ್ನು ನಮ್ಮ ಪಕ್ಷ ಈಗಾಗಲೇ ದೆಹಲಿ ಮತ್ತು ಪಂಜಾಬ ರಾಜ್ಯದಲ್ಲಿ ಕಾರ್ಯ ರೂಪಕ್ಕೆ ತಂದಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ರೋಹನ ಐನಾಪೂರ ಹೇಳಿದರು.
ಬುಧವಾರದಂದು ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷಕ್ಕೆ ರಾಷ್ಟೀಯ ಸ್ಥಾನಮಾನ ಸಿಕ್ಕಿರುವುದು ಸಂತಸದ ಸಂಗತಿ, ರಾಜ್ಯದಲ್ಲಿ ಈಗಾಗಲೇ ಬಹುತೇಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ೮ ಕ್ಷೇತ್ರಗಳಲ್ಲಿ ೫ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ. ಸಿಂದಗಿ ಕ್ಷೇತ್ರದಿಂದ ರಾಜಕೀಯ ಅನುಭವ ಹೊಂದಿರುವ ಹಿರಿಯರಾದ ಮುರಿಗೆಪ್ಪಗೌಡ ರದ್ದೇವಾಡಗಿಯವರನ್ನು ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉಭಯ ಪಕ್ಷಗಳು ನೀಡುತ್ತಿರುವ ಆಶ್ವಾಸನೆಗಳಾದ ೨೦೦ ಯೂನಿಟ್ ಉಚಿತ ವಿದ್ಯುತ್, ೨೦ ಸಾವಿರ ಲೀ ಉಚಿತ ನೀರು ಹೈಟೆಕ್ ಶಾಲೆ ಇನ್ನಿತರ ಕಾರ್ಯ ಯೋಜನೆಗಳನ್ನು ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಕಾರ್ಯ ರೂಪಕ್ಕೆ ತಂದಿದೆ. ಪಂಜಾಬನಲ್ಲಿ ಕೂಡ ಈ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರದ ವಿರುದ್ದ ನಮ್ಮ ಪಕ್ಷ ನಿಂತಿದ್ದು, ಪಕ್ಷದ ಸಚಿವರನ್ನೇ ವಜಾಗೊಳಿಸಿ ಕೇಸು ದಾಖಲಿಸಿ ಇತಿಹಾಸ ಸೃಷ್ಠಿಸಿದೆ. ಈ ಬಾರಿ ಬಹುತೇಕ ಯುವಕರಿಗೆ ಮಣೆ ಹಾಕಿದ್ದು ೧೬ಜನ ರೈತರು, ೧೫ಜನ ಮಹಿಳೆಯರು, ೧೦ ಜನ ವೈದ್ಯರು, ೧೦ ಜನ ಅಭಿಯಂತರರು, ೧೦ ಜನ ಡಾಕ್ಟರೇಟ್, ೧೧ಜನ ಉನ್ನತ ಪದವಿ ೮೨ಜನ ಪದವೀಧರರನ್ನು ಕಣಕ್ಕೆ ಇಳಿಸಿದ್ದೇವೆ ಎಂದರು.
ಮಾತನಾಡಿದ ಅಭ್ಯರ್ಥಿ ಈ ವೇಳೆ ಮುರಿಗೆಪ್ಪಗೌಡ ರದ್ದೇವಾಡಗಿ, ಕಾಂಗ್ರೆಸ್ ಪಕ್ಷದಲ್ಲಿ ನಾನು ೨೦ ವರ್ಷಕ್ಕೂ ಅಧಿಕ ಸಮಯ ದುಡಿದಿದ್ದೇನೆ. ಆದರೆ ಈಗ ನೈತಿಕ ರಾಜಕಾರಣ ಆ ಪಕ್ಷದಲ್ಲಿ ಉಳಿದಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ದತೆ ಇಲ್ಲದ ಕಾರಣ ಪಕ್ಷ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಭೋಗೆಶ ಸೋಲಾಪೂರ,
ತಾಲೂಕು ಅಧ್ಯಕ್ಷ ಶಬ್ಬೀರ ಪಟೇಲ ಬಿರಾದಾರ ಮಾತನಾಡಿದರು.
ಈ ವೇಳೆ ಶಿವು ಕೊಳಾರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
Related Posts
Add A Comment