ಆಲಮಟ್ಟಿ: ಇಲ್ಲಿನ ಕೃಷ್ಣಾ ಸೇತುವೆ ಬಳಿ ಆಕಸ್ಮಿಕ ಬೆಂಕಿ ತಗುಲಿ ಅಪಾರಹಾನಿ ಸಂಭವಿಸಿದ ಘಟನೆ ಬುಧವಾರ ಜರುಗಿದೆ.
ಇಂದು ಸಾಯಂಕಾಲ ಹತ್ತಿದ ಬೆಂಕಿಗೆ ನೂತನವಾಗಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಹಳಿ ಡಬ್ಲಿಂಗ್ ಕಾಮಗಾರಿಗೆ ತಂದಿರಿಸಿದ ಸಲಕರಣೆಗಳು ಭಸ್ಮವಾಗಿವೆ.
ಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಯು ಅರಳದಿನ್ನಿಯ ಸಂಗಯ್ಯ.ವೀರಭದ್ರಯ್ಯ.ಹಿರೇಮಠ ಅವರಿಗೆ ಸೇರಿದ 3ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ 4ತಿಂಗಳ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ.
ಬೆಂಕಿ ನಂದಿಸಲು ಬಸವನಬಾಗೇವಾಡಿ ಅಗ್ನಿಶಾಮಕಠಾಣೆಯ ವಾಹನವು ಸಕಾಲಕ್ಕೆ ಆಗಮಿಸಿ ಪಕ್ಕದಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್, ಪಾಟೀಲರ ಕಬ್ಬಿನ ಬೆಳೆ, ಕನಕಿ ಬಣವೆ ಸೇರಿದಂತೆ ಇನ್ನುಳಿದಂತೆ ಗುಡಿಸಲು ಹೀಗೆ ಬೆಂಕಿಗಾಹುತಿಯಾಗುತ್ತಿದ್ದ ಅಪಾರ ಆಸ್ತಿಯನ್ನು ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಭೀಮಾಶಂಕರ ಮಾದರ ನೇತೃತ್ವದಲ್ಲಿ ಕೆ.ಎಲ್.ಲಮಾಣಿ, ಮಾಂತೇಶ ಮಮದಾಪುರ, ನಾಗಪ್ಪ ಉಂಡಿ, ಶ್ರೀಶೈಲ ಮುಕಾರ್ತಿಹಾಳ ಅವರು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲು ಯಶಸ್ವಿಯಾದರು.
Related Posts
Add A Comment