ಕೆಂಭಾವಿ: ಯುವಕರು ಆಟೋಟಗಳಲ್ಲಿ ಆಸಕ್ತಿ ವಹಿಸಿದಾಗ ಹುರುಪು, ಹುಮ್ಮಸ್ಸು, ಉತ್ಸಾಹ, ಹೆಚ್ಚಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಹೇಳಿದರು.
ಪಟ್ಟಣದ ಎಸ್ ಬಿಸಿ ಕ್ಯಾಂಪ್ ನಲ್ಲಿ ಎಕ್ಸ್ ಟ್ರೀಮ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ಆಟಗಾರರು ಸೋಲು ಗೆಲುವನ್ನು ಸಮ ಚಿತ್ತದಿಂದ ಸ್ವೀಕರಿಸಬೇಕು. ಕ್ರೀಡಾಕೂಟಗಳು ಸಾಮರಸ್ಯದ ಸಂಕೇತ ಎಂದವರು. ಕ್ಲಬ್ ಯುವಕರಿಗಾಗಿ ಕ್ರೀಡಾಕೂಟಗಳು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಬಣ್ಣಿಸಿದರು.
ಎಕ್ಸ್ ಟ್ರೀಮ್ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ಮಹಿಪಾಲರಡ್ಢಿ ಡಿಗ್ಗಾವಿ, ಹಿರಿಯ ಪತ್ರಕರ್ತ ಸಂಜೀವರಾವ್ ಕುಲ್ಕರ್ಣಿ ಕ್ರೀಡಾಕೂಟಗಳನ್ನು ಆಯೋಜಿಸಲು ಕ್ಲಬ್ ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಮುಂಬರುವ ದಿನಗಳಲ್ಲಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಇದೇ ವೇಳೆ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಯಾದಗಿರಿ, ದ್ವಿತೀಯ ಸ್ಥಾನ ಪಡೆದ ಶಹಾಪುರ, ತೃತೀಯ ಸ್ಥಾನ ಪಡೆದ ಹುಣಸಗಿ, ತಂಡಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಮುಖರಾದ ಮಡಿವಾಳಪ್ಪಗೌಡ ಪೋಲೀಸ್ ಪಾಟೀಲ, ಸಾಹೇಬಲಾಲ ಆಂದೇಲಿ, ರವಿ ಸೋನ್ನದ, ಮಹಿಬೂಬಸಾಬ ನಾಶಿ, ರಫೀಕ್ ವಡಕೇರಿ, ಬಂದೇನವಾಜ್ ನಾಲತವಾಡ, ಡಿ ಸಿ ಪಾಟೀಲ, ಸೂಗೂರಯ್ಯ ಇಂಡಿ, ಬಸನಗೌಡ ಪಾಟೀಲ, ನಹೀಮ್ ಸಾಬ ಖಾಜಿ, ಮಾಸುಮಸಾಬ ನಾಶಿ, ಸಲೀಂ ಪೇಶಮಾಮ್, ಪರಶುರಾಮ ನಾರಾಯಣಕರ, ನಂದಪ್ಪ ಕವಲ್ದಾರ, ತಿರುಪತಿ ವಡ್ಡರ, ಮಾರುತಿ ಆರ್ ಭೋವಿ, ಸೇರಿದಂತೆ ಬ್ಯಾಡ್ಮಿಂಟನ್ ಆಟಗಾರರು, ಕ್ರೀಡಾ ಅಭಿಮಾನಿಗಳು, ಇನ್ನಿತರರು ಉಪಸ್ಥಿತರಿದ್ದರು.

