ಕೊಲ್ಹಾರ: ಮಟ್ಟಿಹಾಳ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರ ಪ್ರಾರಂಭಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯರೈತ ಸಂಘ, ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ ಮತ್ತು ಮಟ್ಟಿಹಾಳ ಗ್ರಾಮಸ್ಥರು ಕೊಲ್ಹಾರ ತಹಸೀಲ್ದಾರ ಹಾಗೂ ತಾಲೂಕಾ ಆಹಾರ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ತಹಸೀಲ್ದಾರ ಎಮ್.ರೇಣುಕಾರವರಿಗೆ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ಕೊಲ್ಹಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ನಾಗರದಿನ್ನಿ ಗ್ರಾಮವು ಮಟ್ಟಿಹಾಳದಿಂದ ೨.೫ ಕಿ.ಮೀ ದೂರವಿದ್ದು ತಿಂಗಳ ಪಡಿತರ ತರಲು ಒಂದು ದಿನ ತಮ್ಮ ಕೆಲಸಗಳನ್ನು ಬಿಟ್ಟು ತರುವಂತಾಗಿದ್ದು ೩೫೦ ಕ್ಕಿಂತಲೂ ಅಧಿಕವಿರುವ ಪಡಿತರದಾರರಿಗೆ ಅನುಕೂಲವಾಗಲು ಮಟ್ಟಿಹಾಳ ಗ್ರಾಮದಲ್ಲಿಯೇ ಸರಕಾರವು ಪಡಿತರ ವಿತರಣಾ ಕೇಂದ್ರವನ್ನು ತೆರಯಬೇಕೆಂದು ಹೇಳಿದರು.
ಮಟ್ಟಿಹಾಳ ಗ್ರಾಮದ ಪಡಿತರರಾದ ಶೋಭಾ ಸೊನ್ನದ ಮಾತನಾಡಿ, ವಯಸ್ಸಾದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ ನಾಗರದಿನ್ನಿ ಗ್ರಾಮಕ್ಕೆ ಹೋಗಿ ರೇಶನ್ ತರುವುದು ಬಹಳ ಕಷ್ಟಕರವಾಗಿದೆ. ಹೋಗಿ ಬರಲು ಸರಿಯಾದ ವಾಹನ ಸೌಕರ್ಯವಿಲ್ಲ ನಡೆದುಕೊಂಡು ಹೋಗಿ ತರಬೇಕು ತರುವಾಗ ರಸ್ತೆ ಮೂಲಕ ಸಂಚರಿಸುವ ಅಪರಿಚಿತ ಬೈಕ್ ಸವಾರರನ್ನು ಅವಲಂಬಿಸಬೇಕಾಗುತ್ತದೆ. ಆದಕಾರಣ ಮಟ್ಟಿಹಾಳ ಗ್ರಾಮದಲ್ಲಿ ಪಡಿತರ ವಿತರಣಾಕೇಂದ್ರ ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ತಹಸೀಲ್ದಾರ ಎಮ್.ರೇಣುಕಾ ಮಾತನಾಡಿ ಚುನಾವಣೆ ಮುಗಿದ ನಂತರ ಮಟ್ಟಿಹಾಳ ಗ್ರಾಮಕ್ಕೆ ಒಂದು ಹೊಸ ಪಡಿತರ ವಿತರಣಾ ಕೇಂದ್ರವನ್ನು ಪ್ರಾರಂಭಿಸಲಾಗುವದು. ಅಲ್ಲಿಯವರೆಗೆ ಈ ತಿಂಗಳು ತಾತ್ಕಾಲಿಕವಾಗಿ ಮಟ್ಟಿಹಾಳದಲ್ಲಿ ರೇಶನ್ನು ಹಂಚುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ತಾಲೂಕಾ ಆಹಾರ ನಿರೀಕ್ಷಕ ಎಮ್.ಎಸ್.ಗುತ್ತರಗಿ ಮಾತನಾಡಿ ಈ ತಿಂಗಳು ಮಟ್ಟಿಹಾಳ ಗ್ರಾಮದಲ್ಲಿಯೇ ರೇಶನ್ ಹಂಚುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶಶಿಕಾಂತ ಬಿರಾದಾರ, ಪರಸು ಈಟಿ, ಶ್ರೀಶೈಲ ಬಾಡಗಿ, ಗುರುನಗೌಡ ಬಿರಾದಾರ, ಸುರೇಶ ಪೂಜಾರಿ, ಗೌಡಪ್ಪ ಆಸಂಗಿ, ಈಶ್ವರ ಚಲವಾದಿ, ಮುತ್ತಪ್ಪ ಚಲವಾದಿ, ಮಾದೇವಪ್ಪ ಚಲವಾದಿ, ಶೋಭಾ ಸೊನ್ನದ, ನಿಂಗಮ್ಮ ಅರಕೇರಿ, ಲಕ್ಷೀಬಾಂಯಿ ಹಿರೇಮಠ, ಶಾಂತವ್ವ ಚಲವಾದಿ, ನೀಲವ್ವ ದೊಡಮನಿ, ಶಾಂತವ್ವ ದೊಡಮನಿ, ಮುಕ್ತಾಬಿ ಬಾಗಾನಗರ, ಯಾಸ್ಮಿನ ಬಾಗಾನಗರ,ಶೈಲಾ ಚಲವಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಮಟ್ಟಿಹಾಳದಲ್ಲಿ ಪಡಿತರ ವಿತರಣಾ ಕೇಂದ್ರ ಪ್ರಾರಂಭಿಸಲು ಆಗ್ರಹ
Related Posts
Add A Comment