ವಿಜಯಪುರ: ನಗರದ ಗಾಂಧಿನಗರ ಬಡಾವಣೆಯಲ್ಲಿರುವ ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಗುಂಡಿಯ ಸುತ್ತಲೂ ಗೋಡೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅತಾವುಲ್ಲಾ ದ್ರಾಕ್ಷೀ ಮಾತನಾಡಿ, ವಿಜಯಪುರ ನಗರದ ಗಾಂಧಿನಗರ ಬಡಾವಣೆಯಲ್ಲಿ ನೀರಿನ ಟ್ಯಾಂಕ್ ಹತ್ತಿರ ಕಳೆದ ಹಲವಾರು ವರ್ಷಗಳಿಂದ ಇರುವ ಕಲ್ಲು ಗಣಿಗಾರಿಕೆಯಿಂದ ಉಂಟಾಗಿರುವ ಗುಂಡಿಯ ಸುತ್ತಲು ಸುರಕ್ಷತೆಗಾಗಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಅಲ್ಲಿ ಸುತ್ತು ಮುತ್ತಲೂ ವಾಸಿಸುವ ಜನ – ಜಾನುವಾರುಗಳ , ವಾಹನ ಸವಾರರ ಮತ್ತು ಶಾಲಾ ಮಕ್ಕಳಿ ಜೀವಕ್ಕೆ ಹಾನಿ ಉಂಟಾಗುವ ಸಂಭವ ಇರುತ್ತದೆ. ಅದಲ್ಲದೆ ಗುಂಡಿಯಲ್ಲಿ ಮಳೆ ನೀರು ತುಂಬಿರುವುದರಿಂದ ಜನ – ಜಾನುವಾರುಗಳ ಜೀವಹಾನಿ ಉಂಟಾಗುವ ಸಂಭವ ಹೆಚ್ಚಾಗಿದ್ದು, ಗುಂಡಿಯಲ್ಲಿ ಮಳೆ ನೀರು ತುಂಬಿದ್ದರಿಂದ ಅಲ್ಲಿ ಸುತ್ತು ಮುತ್ತಲೂ ವಾಸಿಸುವ ಜನರದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ. ಅದಲ್ಲದೆ ಕೆಲವು ತಿಂಗಳುಗಳ ಹಿಂದೆ ಇಬ್ಬರು ವ್ಯಕ್ತಿಗಳು ಗುಂಡಿಯ ಸುತ್ತಮುತ್ತಲು ಯಾವುದೇ ರೀತಿಯ ಸುರಕ್ಷತೆ ಇಲ್ಲದಿದ್ದ ಕಾರಣ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆದವರು ಯಾವುದೇ ರೀತಿಯ ಜನ – ಜಾನುವಾರುಗಳ ಜೀವ ಹಾನಿ ಆಗುವ ಮುಂಚೆ ಕೂಡಲೇ ಕಲ್ಲು ಗಣಿಗಾರಿಕೆಯ ಗುಂಡಿಯ ಸುತ್ತಲೂ ಗೋಡೆಯನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಮಶಾಕ ವಾಲಿಕಾರ, ನದೀಮ ಅಥಣಿ, ಇಮ್ರಾನ ದಪೇದಾರ, ಶೇಬಾಜ ವಾಲಿಕಾರ, ಜಬ್ಬಾರ ಮುಲ್ಲಾ, ಅರ್ಬಾಜ್ ಚೌಧರಿ, ಆಬೀದ ಇನಾಮದಾರ, ರಾಜು ಅಥಣೀ, ರಾಜು ಶೇರಖಾನೆ ಇದ್ದರು.
Subscribe to Updates
Get the latest creative news from FooBar about art, design and business.
ಗಾಂಧಿನಗರ ಕಲ್ಲುಗಣಿಗಾರಿಕೆ ಗುಂಡಿ ಸುತ್ತ ಕಂಪೌಂಡ್ ನಿರ್ಮಿಸಲು ಆಗ್ರಹ
Related Posts
Add A Comment

