ಚಿಮ್ಮಡದಲ್ಲಿ ಸಸಿ ನೆಡುವ ಕಾರ್ಯಕ್ರಮ | ನಿವೃತ್ತ ಅಧಿಕಾರಿಯ ಪರಿಸರ ಪ್ರೇಮ
ಚಿಮ್ಮಡ: ಮನುಕುಲ, ಪಕ್ಷಿ ಸಂಕುಲ ಸೇರಿದಂತೆ ಸಕಲ ಜೀವರಾಶಿಗಳ ಉಳಿವಿಗೆ ಹಸಿರು ಪರಿಸರ ಕಾಪಾಡಿಕೊಳ್ಳುವ ಅಗತ್ಯತೆ ಹೆಚ್ಚಿದೆ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿವೃತ್ತ ವಲಯ ಅರಣ್ಯಾಧಿಕಾರಿ ವಾಸುದೇವ ಇಗವೆಯವರು ಆಯೋಜಿಸಿದ್ದ “ಸಸಿ ನೆಡುವ ಕಾರ್ಯಕ್ರಮ”ದ ಸಾನಿಧ್ಯವಹಿಸಿ ಮಾತನಾಡಿದ ಅವರು ಅಭೀವೃದ್ದಿ, ಆದುನಿಕತೆಯ ಭರಾಟೆಯಲ್ಲಿ ಲಕ್ಷಾಂತರ ಗಿಡ, ಮರಗಳನ್ನು ಕಡಿದು ಹಾಕಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಸಾವಿರಾರು ಗಿಡಗಳನ್ನು ನೆಡಲಾಗುತ್ತಿದೆ ಆದರೆ ಅವುಗಳ ಪೋಷಣೆ ಮಾಡದ್ದರಿಂದ ಶೇ. ೯೦ ರಷ್ಟು ಗಿಡಗಳು ಹಾಳಾಗುತ್ತಿವೆ ಇಂಥಹ ಸಂಧರ್ಬದಲ್ಲಿ ವಾಸುದೇವ ರವರು ನಿವೃತ್ತಿ ಹೊಂದಿದ್ದರು ಪರಿಸರ ಬೆಳೆಸುವ ಅವರ ಕಾಳಜಿ ಮಾದರಿಯಾಗಿದೆ ಎಂದರು.
ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ, ಗ್ರಾಮದ ಯುವಕರ ಕಾಳಜಿಯಿಂದ ಗ್ರಾಮದ ಬಂಜರು ಪ್ರದೇಶ ಇಂದು ಹಸಿರು ತಾಣವಾಗಿದೆ. ಗುಡ್ಡದ ದೇವಸ್ಥಾನ ಇಂದು ವಣಸಿರಿ ಪ್ರಭುಲಿಂಗೆಶ್ವರ ದೇವಸ್ಥಾನವಾಗಿದೆ ಎಂದರು.
ನಿವೃತ್ತ ವಲಯ ಅರಣ್ಯಾಧಿಕಾರಿ ವಾಸುದೇವ ಇಗವೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೆಡಲಾಗಿರುವ ೧೫೦೦ ಗಿಡಗಳ ಜಾತಿ, ಅವುಗಳಿಂದ ಮನುಕುಲಕ ದೊರೆಯುವ ಲಾಭಗಳ ಕುರಿತು ಮಾರ್ಮಿಕವಾಗಿ ವಿವರಿಸಿದರು.
ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಬಸವರಾಜ ಬಳಗಾರ, ಪತ್ರಕರ್ತ ಇಲಾಹಿ ಜಮಖಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪರಿಸರ ರಕ್ಷಣೆಗೆ ನೆರವಾದ ಹಲವು ಮಹನೀಯರನ್ನು ಸತ್ಕರಿಸಲಾಯಿತು.

