ಚಡಚಣ: ಜಾಗತಿಕ ಜನಸಂಖ್ಯೆಯ ಪ್ರಮಾಣ ಹೆಚ್ಚುತ್ತಿರುವುದಿಂದ ಸಾಮಾಜಿಕ, ಆರ್ಥಿಕ, ಪರಿಸರ ನಾಶದಂತಹ ಅನೇಕ ಸಮಸ್ಯೆಗಳು ಕಾಡುತ್ತಿವೆ. ಇಂದು ಹೆಚ್ಚುತ್ತಿರುವ ಜನಸಂಖ್ಯೆ ಮಾನವನಿಗೆ ಒಂದು ಸವಾಲಾಗಿ ಪರಿಣಮಿಸಿದೆ ಎಂದು ಶಿಕ್ಷಕರಾದ ಆರ್.ಎಂ.ಚೋಪಡೆ ಹೇಳಿದರು.
ಗುರುವಾರದಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ‘ವಿಶ್ವ ಜನಸಂಖ್ಯಾ ದಿನ’ದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಜನಸಂಖ್ಯೆಯ ಬೆಳವಣಿಗೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜುಲೈ ೧೧ ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಶಿಕ್ಷಕರಾದ ಎಂ.ಸಿ.ಮಾಳಾಬಗಿಯವರು ಮಾತನಾಡುತ್ತ. ಈ ದಿನವು ಜನಸಂಖ್ಯೆಯ ಬೆಳವಣಿಗೆ, ಸಂಪನ್ಮೂಲಗಳ ಮೇಲೆ ಅದರ ಪ್ರಭಾವ ಮತ್ತು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಮಾನವಾದ ಪ್ರವೇಶದ ಅಗತ್ಯತೆಯ ಚರ್ಚೆಗಳನ್ನು ಪ್ರೋತ್ಸಾಹಿಸುತ್ತದೆ. ವಿವಿಧ ಉಪಕ್ರಮಗಳ ಮೂಲಕ, ವಿಶ್ವ ಜನಸಂಖ್ಯಾ ದಿನವು ಜವಾಬ್ದಾರಿಯುತ ಜನಸಂಖ್ಯೆ ನಿರ್ವಹಣೆ, ಲಿಂಗ ಸಮಾನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಈ ವೇಳೆಯಲ್ಲಿ ಶಾಲೆಯ ಮುಖ್ಯ ಗುರುಮಾತೆ ಎಂ.ಎಸ್.ಪಾಟೀಲ, ಶಿಕ್ಷಕರಾದ ಆರ್.ಎಚ್. ನದಾಫ್, ಎಂ.ಎನ್.ಹೋಕಳೆ, ಡಿ.ಜಿ.ಭಂಢರಕೋಟೆ, ರಮೇಶ ತಳಕೇರಿ, ಪ್ರಶಾಂತ ಐಹೋಳ್ಳಿ,ಅಶ್ವಿನಿ ಹಾವಿನಾಳ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

