ವಿಜಯಪುರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಅವರು ಗುರುವಾರ ವಿಜಯಪುರ ತಾಲೂಕಿನ ಸವನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ಗುರುವಾರ ನೀಡಿ ಪರಿಶೀಲನೆ ನಡೆಸಿ,ಶಾಲೆಯ ಸಮಗ್ರ ಕಲಿಕಾ ವಾತಾವರಣ, ಕಲಿಕಾ ಚಟುವಟಿಕೆ, ವಾರ್ಷಿಕ ಕ್ರಿಯಾ ಯೋಜನೆ, ಮಕ್ಕಳ ಕಲಿಕಾ ಪ್ರಕ್ರಿಯೆ, ಕಲಿಕಾ ಗುಣಮಟ್ಟ, ಶಿಕ್ಷಕರ ಬೋಧನಾ ಕೌಶಲ್ಯ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಿದರು.
ಅಲ್ಲದೇ ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಬೇಕು ಎಂದು ಮಾರ್ಗದರ್ಶನ ಮಾಡಿದರು.
ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ. ಎಲ್.ಬಿ, ಶಿಕ್ಷಕರಾದ ಎಸ್.ಬಿ. ಮಕಾನದಾರ, ಎಮ್.ಸಿ.ಮಿಶ್ರಕೋಟೆ, ಕೆ.ಎಚ್. ರಾಠೋಡ, ಪಿ.ಎಸ್. ಹಿರೇಮಠ, ಎಂ.ಆರ್.ಮುದ್ದೇಬಿಹಾಳ, ಎ.ವಿ. ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
