ಚಡಚಣ: ಬರಿ ಅಂಕ ಗಳಿಸುವುದು ಶಿಕ್ಷಣದ ಉದ್ದೇಶವಲ್ಲ, ಆದರೆ ಸದ್ಗುಣಗಳನ್ನು ಕಲಿಸುವದು ಶಿಕ್ಷಣದ ಮುಖ್ಯ ಉದ್ದೇಶ ಎಂದು ಕಾತ್ರಾಳದ ಗುರದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ಚಡಚಣದ ಸಂಗಮೇಶ್ವರ ಪದವಿ ಪೂವ ಮಹಾವಿದ್ಯಾಲಯದ ವತಿಯಿಂದ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತುಕ್ರೀಡಾ ಹಾಗೂ ಸಾಂಸ್ಕತಿಕ ವಿಭಾಗ, ಎನ್,ಎಸ್.ಎಸ್, ರೇಂಜರ, ರೋವರ ಮತ್ತು ರೆಡ್ ಕ್ರಾಸ್ ವಿಭಾಗಗಳನ್ನು ಉಧ್ಘಾಟಿಸಿ ಅವರು ಆಶಿರ್ವಚನ ನೀಡಿದರು.
ವಿದ್ಯಾರ್ಥಿಗಳು ಬರಿ ಕಾಲೇಜು ಪರೀಕ್ಷೆಗಳಲ್ಲಿ ಮಾತ್ರ ಯಶಸ್ವು ಸಾಧಿಸದೆ ಬದುಕೆಂಬ ಪರೀಕ್ಷೆಯಲ್ಲಿಯೂ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಯಾದವನು ಪ್ರತಿದಿನ ಹೊಸದನ್ನು ಕಲಿಯಬೇಕು. ಕಲಿಕೆಯನ್ನು ನಿರಂತರವಾಗಿ ಇಟ್ಟುಕೊಳ್ಳಬೇಕು. ಎಲ್ಲರಿಂದಲೂ ಒಂದಿಲ್ಲೊಂದು ಒಳ್ಳೆಯ ವಿಷಯವನ್ನು ಕಲಿಯಬೇಕು. ಜೀವನದಲ್ಲಿ ಸಂಸ್ಕಾರಗಳನ್ನು ಕಲಿತು ಸಾಧನೆ ಮಾಡಬೇಕು. ಪ್ರತಿಯೊಬ್ಬರು ತಂದೆ-ತಾಯಿಗಳ ಸೇವೆ ಮಾಡಬೇಕು. ತಂದೆ-ತಾಯಿಗಳ ಸೇವೆ ಮಾಡದವ ಸಮಾಜದ ಸೇವೆ ಮಾಡಲು ಸಾಧ್ಯವಿಲ್ಲ ಎಂದ ಅವರು, ಒಳ್ಳೆಯ ಶಿಕ್ಷಣದ ಅರ್ಥ ಅಂಕವಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಗಮೇಶ್ವರ ಸಂಸ್ಥೆಯ ಹಿರಿಯ ನಿರ್ದೇಶಕ ಎಸ.ಆರ್. ಅವಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌರವ ಕಾರ್ಯದರ್ಶಿ ವಿ.ಎಸ್. ಗಿಡವೀರ, ನಿವೃತ್ತ ಪ್ರಾಚಾರ್ಯ ಎಸ್.ಕೆ.ಕುಲಕರ್ಣಿ, ನಿವೃತ್ತ ಉಪನ್ಯಾಸಕ ಆರ್.ಪಿ.ಬಗಲಿ ಆಗಮಿಸಿದ್ದರು. ಪಿಯುಸಿ ದ್ವಿತೀಯ ವರ್ಷದಲ್ಲಿಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ 110 ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್. ಮುಖ್ಯಸ್ಥ ಎಚ್.ಎಸ್ ಮಂಕಾಂದಾರ, ರೆಡ್ ಕ್ರಾಸ್ ಮುಖ್ಯಸ್ಥ ಬಾಲವರ್ಧನ ರೆಡ್ಡಿ, ರೇಂಜರ ಮತ್ತು ರೋವರ ಮುಖ್ಯಸ್ಥ ಶಿವಾನಂದ ಜಿಗಜೇವಣಿ ಸೇರಿ ಎಲ್ಲ ಉಪನ್ಯಾಸಕರು, ಪಾಲಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಪಿಯು ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
ಸದ್ಗುಣಗಳನ್ನು ಕಲಿಸುವುದೆ ಶಿಕ್ಷಣದ ಉದ್ದೇಶ :ಅಮೃತಾನಂದ ಶ್ರೀ
Related Posts
Add A Comment

