ದೇವರಹಿಪ್ಪರಗಿ: ಡೆಂಗ್ಯೂ, ಚಿಕನ್‌ಗುನ್ಯಾ ರೋಗಗಳು ಸೊಳ್ಳೆಗಳಿಂದ ಹರಡುವ ರೋಗಗಳಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ತಾಲ್ಲೂಕು ಹಾಗೂ ಸ್ಥಳೀಯ ಆಡಳಿತ ಅಗತ್ಯವಾದ ಕ್ರಮವಹಿಸಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಜರುಗಿದ ಡೆಂಗ್ಯೂ, ಚಿಕನ್‌ಗುನ್ಯಾ ಸೇರಿದಂತೆ ಮಳೆಗಾಲದಲ್ಲಿ ಹರಡುವ ರೋಗಗಳ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಎಲ್ಲ ವಾರ್ಡಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಈಗಾಗಲೇ ಫಾಗಿಂಗ್ ಆರಂಭಿಸಲಾಗಿದೆ. ಜೊತೆಗೆ ಮಳೆನೀರು ಒಂದೆಡೇ ಸಂಗ್ರಹವಾಗದಂತೆ ಕ್ರಮವಹಿಸಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೆ ಈ ರೋಗಗಳ ಕುರಿತು ಸೂಕ್ತ ಮಾಹಿತಿ ಒದಗಿಸಿ ಎಚ್ಚರಿಕೆ ವಹಿಸಲು ಮುಂದಾಗುವಂತೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಿಬ್ಬಂದಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ್ ರೇವೂರಕರ್, ಸಿಎಚ್‌ಓ ಸಚೀನ ಪಾಟೀಲ ಮಾತನಾಡಿ, ಡೆಂಗ್ಯೂ, ಚಿಕನ್‌ಗುನ್ಯಾ ಹರಡುವ ಬಗೆ, ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳು, ಬಳಕೆಯಿಲ್ಲದ ಟಾಯರ್, ತೆಂಗಿನಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು. ರೋಗಗಳಿಗೆ ದೊರೆಯುವ ಅಗತ್ಯ ಚಿಕಿತ್ಸೆಗಳ ಕುರಿತು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಸಹಾಯುಕ ನಿರ್ದೇಶಕ(ನರೇಗಾ) ಶಾಂತಗೌಡ ನ್ಯಾಮಣ್ಣವರ, ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಪಟ್ಟಣ ಪಂಚಾಯಿತಿ ಸದಸ್ಯ ಕಾಶೀನಾಥ ಬಜಂತ್ರಿ, ಸೋಮು ದೇವೂರ, ಮಲ್ಲಿಕಾರ್ಜುನ ಜಡಿಮಠ, ಪ್ರಕಾಶ ಮಲ್ಲಾರಿ, ಬಸವರಾಜ ದೇವಣಗಾಂವ ಇದ್ದರು.
Subscribe to Updates
Get the latest creative news from FooBar about art, design and business.
ಸೊಳ್ಳೆಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮವಹಿಸಿ :ತಹಶೀಲ್ದಾರ ಸಿಂದಗಿ
Related Posts
Add A Comment

