ವಿಜಯಪುರ: ಪ್ರಸಕ್ತ ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಗೆ ದ್ರಾಕ್ಷಿ ಬೆಳೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (ಖWಃಅIS) ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ. ಬೆಳೆ ಸಾಲ ಪಡೆದ ರೈತರುಹಾಗೂ ಬೆಳೆ ಸಾಲ ಪಡೆಯದೆ ಇರುವ ರೈತರು ತಮ್ಮ ಆಧಾರ ಕಾರ್ಡ ಝರಾಕ್ಸ, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕುಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್‌ಸಿ ಸೆಂಟರ್‌ಗಳಲ್ಲಿ ವಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಲು ಕೋರಿದೆ.
ದ್ರಾಕ್ಷಿ ಬೆಳೆಗೆ ವಿಮೆ ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ: ೧೫-೦೭-೨೦೨೪, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ರೂ. ೧೪,೦೦೦ ರೂ.ಗಳಾಗಿರುತ್ತದೆ. ರೈತರು ಕಡ್ಡಾಯವಾಗಿ ಎಫ್‌ಐಡಿ, ಹಾಗೂ ಎನ್‌ಪಿಸಿಐ ಸಿಡಿಂಗ್ ಮಾಡಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹಾಗೂ ಹತ್ತಿರದ ಬ್ಯಾಂಕ್ ಶಾಖೆ, ಅಗ್ರಿಕಲ್ಚರ ಇನ್ಸುರನ್ಸ ಕಂಪನಿ ವಿಮಾ ಸಂಸ್ಥೆಯ ಪ್ರತಿನಿಧಿ ಮೊಬೈಲ್ ನಂ: ೮೮೯೯೮೮೭೮೭೩, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ವಿಜಯಪುರ – ೯೫೩೫೧೮೫೯೯೯, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಇಂಡಿ – ೯೦೦೮೪೦೪೦೪೧, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸಿಂದಗಿ- ೮೧೯೭೪೬೪೬೭೫, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಬ.ಬಾಗೇವಾಡಿ – ೯೮೪೫೨೧೫೩೬೨, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಮುದ್ದೇಬಿಹಾಳ – ೮೧೨೩೬೮೬೯೦೩ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
ದ್ರಾಕ್ಷಿ ಬೆಳೆ: ಹವಾಮಾನ ಆಧಾರಿತ ಬೆಳೆ ವಿಮೆಯಡಿ ನೊಂದಾಯಿಸಲು ಆಹ್ವಾನ
Related Posts
Add A Comment
